2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದ ಬೆನ್ನಿಗೇ, ಮೇ 23ರಿಂದ ಸಾರ್ವಜನಿಕರು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ 2,000 ರೂ. ಮುಖಬೆಲೆಯ ನೋಟುಗಳನ್ನು ಕೊಟ್ಟು ಬದಲಿ ನೋಟುಗಳನ್ನು ಪಡೆಯುತ್ತಿದ್ದಾರೆ.
ಮೇ 23ರಿಂದ ಇದುವರೆಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳಲ್ಲಿ 14,000 ಕೋಟಿಗಳಷ್ಟು ಠೇವಣಿ ಸ್ವೀಕರಿಸಿದ್ದು, 3,000 ಕೋಟಿ ರೂ.ಗಳಷ್ಟು ಹಣವನ್ನು ಬೇರೆ ಮುಖಬೆಲೆಯ ನೋಟುಗಳಲ್ಲಿ ಗ್ರಾಹಕರಿಗೆ ವಿನಿಮಯ ಮಾಡಿದೆ.
ಮೇ 23ರಿಂದ ಸೆಪ್ಟೆಂಬರ್ 30ರವರೆಗೂ 2000 ರೂ. ಮುಖಬೆಲೆಯ ನೋಟುಗಳನ್ನು ದೇಶವಾಸಿಗಳು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು, ಅವುಗಳ ಬದಲಿಗೆ ಬೇರೆ ನೋಟುಗಳನ್ನು ಪಡೆಯಬಹುದಾಗಿದೆ.