alex Certify ʼಗೋಮಿ ಗೋಮಿʼ ಹಾಡಿಗೆ ಆಫ್ರಿಕನ್ ಮಕ್ಕಳ ಅದ್ಭುತ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 30 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೋಮಿ ಗೋಮಿʼ ಹಾಡಿಗೆ ಆಫ್ರಿಕನ್ ಮಕ್ಕಳ ಅದ್ಭುತ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 30 ಮಿಲಿಯನ್ ಮಂದಿ..!

ಇನ್ಸ್ಟಾಗ್ರಾಂನಲ್ಲಿ ನೀವು ಹಲವಾರು ರೀಲ್ಸ್ ಗಳನ್ನು ನೋಡಿರ್ತೀರಾ. ‘ಮೈ ಮನಿ ಡೋಂಟ್ ಜಿಗಲ್ ಜಿಗಲ್’ ನಂತಹ ಟ್ರೆಂಡಿಂಗ್ ಹಾಡುಗಳಲ್ಲಿ ನೃತ್ಯ ಮಾಡುವ ಜನರ ಅನೇಕ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಬಹುಶಃ ನೀವು ನೋಡಿರಬಹುದು. ಇದೀಗ ಹೊಸ ಹಾಡು ಟಿಕ್‌ಟಾಕ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಎಂದಿನಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ನೃತ್ಯದ ಸವಾಲನ್ನು ಸ್ವೀಕರಿಸುತ್ತಿದ್ದಾರೆ.

ಹೌದು, ಟಿಕ್‌ಟಾಕ್ ಮೂಲಕ ವೈರಲ್ ಆಗಿರುವ ಅರೇಬಿಕ್ ಹಾಡು ‘ಗೋಮಿ ಗೋಮಿ’. ಈ ಹಾಡಿಗೆ ಅನೇಕ ಮಂದಿ ಡಾನ್ಸ್ ಮಾಡಿರೋದನ್ನು ನೀವು ನೋಡಿರ್ತೀರಾ. ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡು ಟಾಪ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡನ್ನು ಮೂಲತಃ ‘ಗೌಮಿ’ ಎಂದು ಕರೆಯಲಾಗುತ್ತದೆ. ಇದನ್ನು ಲೆಬನಾನಿನ ಸಿಂಗರ್ ಮಿರಿಯಮ್ ಫೇರ್ಸ್ ಹಾಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಫ್ರಿಕನ್ ಮಕ್ಕಳ ಗುಂಪೊಂದು ಗೋಮಿ ಗೋಮಿ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದೆ. ಉಗಾಂಡಾ ಮೂಲದ ಮಸಾಕಾ ಕಿಡ್ಸ್ ಆಫ್ರಿಕಾನಾ ಎಂಬ ಎನ್‌ಜಿಒ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಪೋಸ್ಟ್ ಮಾಡಿದೆ. 30.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 1.8 ದಶಲಕ್ಷ ಲೈಕ್ ಗಳೊಂದಿಗೆ ವೈರಲ್ ಆಗಿದೆ.

ವಿಡಿಯೋದಲ್ಲಿ, ಆಫ್ರಿಕನ್ ಮಕ್ಕಳ ಗುಂಪು ಅದ್ಭುತವಾಗಿ ನೃತ್ಯ ಮಾಡುವುದನ್ನು ನೋಡಬಹುದು. ಹರ್ಷಚಿತ್ತದಿಂದಿರುವ ಮಕ್ಕಳು ಗೋಮಿ ಗೋಮಿ ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ಮತ್ತಷ್ಟು ಮಕ್ಕಳು ಸೇರಿ ಸಖತ್ ಮಸ್ತಿ ಮಾಡಿದ್ದಾರೆ. ಅವರ ಸಂತೋಷದ ಮತ್ತು ಮುದ್ದಾದ ಡಾನ್ಸ್ ಆನ್‌ಲೈನ್‌ನಲ್ಲಿ ಅನೇಕ ಹೃದಯಗಳನ್ನು ಗೆಲ್ಲುತ್ತಿವೆ. ನೆಟ್ಟಿಗರು ಅವರ ನೃತ್ಯವನ್ನು ಇಷ್ಟಪಟ್ಟಿದ್ದು, ಮಕ್ಕಳನ್ನು ಅತ್ಯಂತ ಪ್ರತಿಭಾವಂತರು ಎಂದು ಕರೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...