alex Certify ʼಗಲ್ಲಾನ್​ ಗುಡಿಯನ್ʼ ​ಗೆ ಆಫ್ರಿಕನ್​ ಮಕ್ಕಳಿಂದ ಬೊಂಬಾಟ್‌ ಸ್ಟೆಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಲ್ಲಾನ್​ ಗುಡಿಯನ್ʼ ​ಗೆ ಆಫ್ರಿಕನ್​ ಮಕ್ಕಳಿಂದ ಬೊಂಬಾಟ್‌ ಸ್ಟೆಪ್ಸ್‌

ಆಫ್ರಿಕನ್​ ಮಕ್ಕಳ ಗುಂಪು ಗಲ್ಲಾನ್​ ಗುಡಿಯಾನ್​ ಎಂಬ ಪ್ರಸಿದ್ಧ ಗೀತೆಗೆ ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್​ನ ವಿಡಿಯೋ ಕ್ಲಿಪ್​ 5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ.

ಎನ್​ಜಿಒ ಮಸಾಕಾ ಕಿಡ್ಸ್​ ಆಫ್ರಿಕನಾ ಎಂಬ ಪೇಜ್​ ಇನ್​ಸ್ಟಾದಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಡ್ಯಾನ್ಸ್​ ಮಾಡಿದ ಮಕ್ಕಳು ಆ ಎನ್​ಜಿಒದ ಸಂಸ್ಥೆಯ ಭಾಗವಾಗಿದ್ದಾರೆ.

ಮೂವರು ಮಕ್ಕಳು ಆಕರ್ಷಕವಾಗಿ ಹಾಡಿಗೆ ಕಾಲು ಬೆಂಡ್​ ಮಾಡಿ ಡ್ಯಾನ್ಸ್​ ಮಾಡುವುದನ್ನು ವಿಡಿಯೋ ಕ್ಲಿಪ್​ನಲ್ಲಿ ಕಾಣಬಹುದು. ಇತರ ಮಕ್ಕಳು ತಮ್ಮ ಸ್ಟೆಪ್​ ಅನ್ನು ಪುನರಾವರ್ತಿಸುವುದು ಸಹ ಕಾಣಿಸುತ್ತದೆ. ಮುದ್ದಾದ ಪ್ರದರ್ಶನದಿಂದ ನೆಟ್ಟಿಗರು ನಿಸ್ಸಂಶಯವಾಗಿ ಬೌಲ್ಡ್​ ಆಗಿದ್ದಾರೆ. ಇದಕ್ಕೆ ಉದಾಹರಣೆ ತಮ್ಮ ಅಭಿಪ್ರಾಯವನ್ನು ಕಾಮೆಂಟ್​ ವಿಭಾಗದಲ್ಲಿ ದಾಖಲಿಸಿದ್ದಾರೆ.

ಈ ಮಕ್ಕಳು ತುಂಬಾ ಪ್ರತಿಭಾವಂತರು, ಅವರ ಡ್ಯಾನ್ಸ್​ ನೋಡಲು ನಾನು ಇಷ್ಟಪಡುತ್ತೇನೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಮತ್ತೊಬ್ಬ ಬಳಕೆದಾರರು ಆ ಮಕ್ಕಳು ಬೆಸ್ಟ್​, ಡ್ಯಾನ್ಸ್​ ಮಾಡುವುದನ್ನು ನೋಡಲು ಎಷ್ಟು ಸಂತೋಷವಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...