
ಆಗಸ್ಟ್ 16ರಂದು ಅಫ್ಘನ್ನರು ಸಿಕ್ಕ ವಿಮಾನವನ್ನೇರಿ ತಾಲಿಬಾನ್ ಕೈಗೆ ಸಿಗದಂತೆ ಪಲಾಯನಗೈಯ್ಯಲು ಮುಂದಾಗಿದ್ದು, ಈ ವೇಳೆ ಭಾರೀ ಕಾಲ್ತುಳಿತ ಸಂಭವಿಸುತ್ತಿರುವ ಮನಕಲಕುವ ದೃಶ್ಯಗಳು ವೈರಲ್ ಆಗಿವೆ.
ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ, ಅಮೆರಿಕದ ಸರಕು ಸಾಗಾಟ ವಿಮಾನವೊಂದರಲ್ಲಿ 640 ಮಂದಿ ಅಫ್ಘನ್ನರು ಕಿಕ್ಕಿರಿದು ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕ ಮಿಲಿಟರಿಯ ಸಿ-17 ಗ್ಲೋಬ್‌ಮಾಸ್ಟರ್ ಸರಕು ಸಾಗಾಟದ ವಿಮಾನದಲ್ಲಿ ಸೆರೆ ಹಿಡಿಯಲಾದ ಈ ಚಿತ್ರವನ್ನು ಅಮೆರಿಕ ರಕ್ಷಣಾ ಮತ್ತು ಭದ್ರತಾ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.