
ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಲೇ ತಮ್ಮ ದೇಶ ತೊರೆದಿರುವ ಅಫ್ಘನ್ ಪಾಪ್ ತಾರೆ ಹಾಗೂ ರಿಯಾಲಿಟಿ ಶೋ ಜಡ್ಜ್ ಆಗಿರುವ ಆರ್ಯನಾ ಸಯೀದ್, ಅಮೆರಿಕದ ವಿಮಾನವೊಂದರಲ್ಲಿ ತಮ್ಮ ಫೋಟೋ ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದೋಹಾ ತಲುಪಿದ ಇಸ್ತಾಂಬುಲ್ ವಿಮಾನವನ್ನು ಕಾಯುತ್ತಿರುವುದಾಗಿ ತಿಳಿಸಿದ್ದ ಸಯೀದ್ ಆತ್ಮಹತ್ಯಾ ಬಾಂಬರ್‌ಗಳು ಹಾಗೂ ಸ್ಪೋಟಗಳ ಭಯವಿಲ್ಲದೇ ಶಾಂತಿಯುತವಾಗಿ ಬದುಕುವ ಅವಕಾಶ ಸಿಗಲಿ ಎಂದು ತಮ್ಮ ದೇಶದ ನಾಗರಿಕರಿಗಾಗಿ ಪ್ರಾರ್ಥಿಸುವುದಾಗಿ ಹೇಳಿಕೊಂಡಿದ್ದಾರೆ.
ಅಮೆರಿಕ ವಿಮಾನದಿಂದ ಬಿದ್ದು ಮೃತಪಟ್ಟ ಅಫ್ಘನ್ ರಾಷ್ಟ್ರೀಯ ಫುಟ್ಬಾಲ್ ಆಟಗಾರ
“ತಾಯಿನಾಡನ್ನು ಬಿಡುವ ಕೊನೆಯ ಸೈನಿಕ ನಾನಾಗಿರುತ್ತೇನೆ ಎಂದು ನನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದೆ. ಈಗ ಹಾಗೇ ಆಗಿದೆ. ನನ್ನ ದೇಶದ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಉದ್ದದ ಕ್ಯಾಪ್ಷನ್ ಮೂಲಕ ಕೇಳಿಕೊಂಡಿದ್ದಾರೆ.
“ನಾನು ಮನೆಗೆ ಮರಳಿದ ಮೇಲೆ, ಶಾಕ್ ಹಾಗೂ ಅಪನಂಬಿಕೆಯ ಜಗತ್ತಿನಿಂದ ನನ್ನ ಮನಸ್ಸು ಹಾಗೂ ಭಾವನೆಗಳು ಸಹಜತೆಗೆ ಮರಳಿದ ಮೇಲೆ, ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಕಥೆಗಳಿವೆ” ಎಂದು ಸಯೀದ್ ತಿಳಿಸಿದ್ದಾರೆ.
https://www.instagram.com/p/CSr60xus1ds/?utm_source=ig_web_copy_link