ಸಾರ್ವಜನಿಕ ಸ್ಥಳದಲ್ಲಿ ದೇಹ ಮತ್ತು ಮುಖ ಮುಚ್ಚಿಕೊಳ್ಳುವಂತಹ ವಸ್ತ್ರ ಧರಿಸುವಂತೆ ತಾಲಿಬಾನ್ ಆಡಳಿತ ಫತ್ವಾ ಹೊರಡಿಸಿರುವುದನ್ನು ವಿರೋಧಿಸಿ ಹತ್ತಕ್ಕೂ ಅಧಿಕ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನದ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬಾತುಲ್ಹಾ ಅಖುಂಡ್ಝಾದಾ, ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕೆಂದು ಫತ್ವಾ ಹೊರಡಿಸಿದ್ದರು.
ಮಹಿಳೆಯರ ಗುಂಪೊಂದು ಧೈರ್ಯ ತೋರಿ ರಾಜಧಾನಿ ಕಾಬೂಲಿನಲ್ಲಿ ನ್ಯಾಯ ಬೇಕು ಎಂದು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದೆ. ವಿಶೇಷವೆಂದರೆ ಇವರಲ್ಲಿ ಬಹುತೇಕ ಮಂದಿ ಮುಖ ಮುಚ್ಚಿಕೊಳ್ಳದೇ ತಾಲಿಬಾನಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುರ್ಖಾ ಕಡ್ಡಾಯ ಬೇಡವೇ ಬೇಡ ಎಂದು ಒತ್ತಾಯಿಸಿದ್ದಾರೆ.
ಮ್ಯಾನ್ ಹೋಲ್ ಗೆ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ಗೆ ಗಾಯ
ಪ್ರತಿಭಟನಾ ರ್ಯಾಲಿ ನಡೆಸಿದ ಈ ಗುಂಪನ್ನು ತಡೆದ ತಾಲಿಬಾನಿ ಹೋರಾಟಗಾರರು, ಈ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರನ್ನೂ ತಡೆದಿದ್ದಾರೆ.
ಈ ರ್ಯಾಲಿಯಲ್ಲಿ ಭಾಷಣ ಮಾಡಿದ ಮಹಿಳಾ ನಾಯಕಿ ಸಾಯಿರಾ ಸಮಾ ಅಲಿಮ್ಯಾರ್, ನಾವು ಮನುಷ್ಯರಾಗಿ ಜೀವಿಸಲು ಬಯಸುತ್ತೇವೆಯೇ ಹೊರತು ಮನೆಯೊಂದರಲ್ಲಿ ಕೂಡಿ ಹಾಕಿದ ಪ್ರಾಣಿಯಂತೆ ಜೀವಿಸಲು ಬಯಸುವುದಿಲ್ಲ. ನಮಗೆ ನಮ್ಮದೇ ಆದ ರೀತಿಯಲ್ಲಿ ಜೀವಿಸುವ ಹಕ್ಕಿದೆ ಎಂದು ಹೇಳಿದ್ದಾರೆ.