ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿನ ಕಲಾವಿದರು, ಕಾರ್ಯಕರ್ತರು ಹಾಗೂ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ಹೀಗಾಗಿ ಭಯೋತ್ಪಾದನೆ ಸಂಘಟನೆ ವಿರುದ್ದ ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರನ್ನು ಚದುರಿಸಲು ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ. ಸದ್ಯ, ಇದರಲ್ಲೊಂದು ಫೋಟೋ ಈಗ ಎಲ್ಲರ ಗಮನ ಸೆಳೆದಿದೆ.
ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ತಾಲಿಬಾನ್ ಗುಂಡು ಹಾರಿಸಿದ್ದು, ಈ ವೇಳೆ ಮಹಿಳೆಯೊಬ್ಬಳ ಮೇಲೆ ಬಂದೂಕನ್ನು ಗುರಿಯಿಡಲಾಗಿದೆ. ಆದರೂ ಹೆದರದ ಮಹಿಳೆ ಬಂದೂಕಿಗೆ ಹೆದರದೆ ದಿಟ್ಟವಾಗಿ ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದು. ಈ ಫೋಟೋ ಈಗ ವಿಶ್ವದೆಲ್ಲೆಡೆ ಹಲವರ ಗಮನ ಸೆಳೆದಿದ್ದು, ಮಹಿಳೆಯ ಧೈರ್ಯಕ್ಕೆ ಭೇಷ್ ಎಂದಿದ್ದಾರೆ.
ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಗುಡ್ ನ್ಯೂಸ್….! ಇಂಟರ್ನೆಟ್ ಸೌಕರ್ಯವಿಲ್ಲದೆಯೇ ಸ್ವೀಕರಿಸಬಹುದು ಡಿಜಿಟಲ್ ಪಾವತಿ
ಜನರು ಪಡೆದ ಶಿಕ್ಷಣ ಮತ್ತು ಸ್ವಾತಂತ್ರ್ಯ ವ್ಯರ್ಥವಾಗಿಲ್ಲ. ಮಹಿಳೆಯರು ತಮ್ಮ ಪಾಲಿಸಬೇಕಾದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅವರು ತಮ್ಮ ಮೇಲೆ ಎಸಗುವ ಹಿಂಸೆಯನ್ನು ತಡೆದುಕೊಳ್ಳಬಲ್ಲರು ಎಂದು ಭಾವಿಸುತ್ತೇನೆ. ಧೈರ್ಯ ತೋರಿದ ಈ ಮಹಿಳೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸಬೇಕು ಎಂದು ಹಲವರು ರೀಟ್ವೀಟ್ ಮಾಡಿದ್ದಾರೆ.