alex Certify ತಾಯ್ನಾಡಿನ ಕಷ್ಟವನ್ನು ಹಾಡಿನ ಮೂಲಕ ಹೊರ ಹಾಕಿದ ಅಫ್ಘನ್​ನ ಖ್ಯಾತ ಗಾಯಕ….! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯ್ನಾಡಿನ ಕಷ್ಟವನ್ನು ಹಾಡಿನ ಮೂಲಕ ಹೊರ ಹಾಕಿದ ಅಫ್ಘನ್​ನ ಖ್ಯಾತ ಗಾಯಕ….! ವಿಡಿಯೋ ವೈರಲ್​

ತಾಲಿಬಾನ್​ ಆಡಳಿತ ಆರಂಭವಾದ ಬಳಿಕ ಅಫ್ಘಾನಿಸ್ತಾನವನ್ನು ತ್ಯಜಿಸಿರುವ ಪ್ರಖ್ಯಾತ ಗಾಯಕ ಶರಾಫತ್​ ಪರ್ವಾನಿ ಹಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಅಮೆರಿಕದ ಮಿಲಿಟರಿ ಬೇಸ್​ ಅಥವಾ ನಿರಾಶ್ರಿತರ ಕ್ಯಾಂಪ್​ನಲ್ಲಿ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಈ ವಿಡಿಯೋವನ್ನು ನ್ಯೂಯಾರ್ಕ್​ ಟೈಮ್ಸ್​ ವರದಿಗಾರ ಶರೀಫ್​ ಹಸನ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

1 ನಿಮಿಷ 50 ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಶರಾಫತ್​ ಪರ್ವಾನಿ ಇತರೆ ದೇಶವಾಸಿಗಳ ಜೊತೆ ಸೇರಿ ತಮ್ಮ ತಾಯ್ನಾಡಿನ ಬಗ್ಗೆ ಹಾಡನ್ನು ಹಾಡಿದ್ದಾರೆ. ನನ್ನ ತಾಯ್ನಾಡಿನ ವೇದನೆಯಿಂದ ಬೇಸತ್ತಿದ್ದೇನೆ, ನನ್ನ ತಾಯ್ನಾಡಿನ ನೋವಿಗೆ ಔಷಧವಿಲ್ಲ ಎಂದ ಸಾಲುಗಳನ್ನು ಗಾಯಕ ಶರಾಫತ್​ ಯಾವುದೋ ಮಿಲಿಟರಿ ತಾಣ ಅಥವಾ ಅಮೆರಿಕ ನಿರಾಶ್ರಿತರ ಕ್ಯಾಂಪ್​ನಲ್ಲಿ ಹೇಳಿರುವ ಸಾಧ್ಯತೆ ಇದೆ ಎಂದು ಶೀರ್ಷಿಕೆ ನೀಡಲಾಗಿದೆ.

ಶರಾಫತ್​ ಅಪ್ಘಾನಿಸ್ತಾನದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ಸಾಗಿತ್ಯ ರಚನೆಕಾರರಾಗಿದ್ದಾರೆ. ಇವರ ಬಳಿ 40 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ ಯುಟ್ಯೂಬ್​ ಚಾನೆಲ್​ ಕೂಡ ಇದೆ.

— Sharif Hassan (@MSharif1990) August 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...