alex Certify ಸಂಬಂಧಿಯೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿದ ಪತಿಯಿಂದಲೇ ಘೋರಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಯೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿದ ಪತಿಯಿಂದಲೇ ಘೋರಕೃತ್ಯ

ಹೊಸಪೇಟೆ: ಪತ್ನಿಯ ಶೀಲ ಶಂಕಿಸಿದ ಪತಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ನಡೆದಿದೆ.

22 ವರ್ಷದ ದೀಪಾ ಕೊಲೆಯಾದ ಮಹಿಳೆ. ಆಕೆಯ ಪತಿ ರವಿ(27) ಕೊಲೆ ಆರೋಪಿಯಾಗಿದ್ದಾನೆ. 10 ತಿಂಗಳ ಹಿಂದೆ ದಂಪತಿಗೆ ಮದುವೆಯಾಗಿದ್ದು, ಆಗಾಗ ಜಗಳವಾಡುತ್ತಿದ್ದರು. ಸಂಬಂಧಿಯೊಬ್ಬಬ್ಬನ ಜೊತೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ರವಿ ಜಗಳವಾಡುತ್ತಿದ್ದ.

ಮಂಗಳವಾರ ಮಧ್ಯಾಹ್ನ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ರವಿ ನಂತರ ಮೃತದೇಹವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ನಂದಿಪುರದ ಸಂಬಂಧಿಕರ ಮನೆ ಮುಂದೆ ಇಟ್ಟು ಬಂದಿದ್ದಾನೆ. ಮೃತ ದೀಪಾಳ ತಾಯಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...