
ಸಾಕುನಾಯಿಗಳೆಂದರೆ ಮಾಲೀಕರಿಗೆ ಎಷ್ಟೆಲ್ಲಾ ಪ್ರೀತಿ ಕಾಳಜಿ ಇರುತ್ತದೆ ಎಂದು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.
ಇಂಥದ್ದೇ ನಿದರ್ಶನವೊಂದರಲ್ಲಿ, ಮುದ್ದಿನ ನಾಯಿಯನ್ನು ಜೋಕಾಲಿ ಮೇಲೆ ಕೂರಿಸಿಕೊಂಡು ಆಡಿಸುತ್ತಿರುವ ಮಾಲೀಕನನ್ನು ನೋಡಬಹುದಾಗಿದೆ.
ಹಚ್ಚ ಹಸಿರಿನಿಂದ ಸುತ್ತುವರೆಲ್ಪಟ್ಟ ವಾತಾವರಣದಲ್ಲಿ ನಾಯಿಯೊಂದಿಗೆ ಮಾಲೀಕ ಎಂಜಾಯ್ ಮಾಡುತ್ತಿರುವ ದೃಶ್ಯ ಪಾಸಿಟಿವ್ ವೈಬ್ ಸೃಷ್ಟಿ ಮಾಡುವಂತಿದೆ.