ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆತ್ಮೀಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಣೀತಾ, ನಿತಿನ್ ರಾಜು ಜೊತೆ ಸಪ್ತಪದಿ ತುಳಿದಿದ್ದಾರೆ.
ದಂಪತಿಯ ಸ್ನೇಹಿತರೊಬ್ಬರು ಮದುವೆಯ ಫೋಟೋ ಶೇರ್ ಮಾಡಿದ ಬಳಿಕ ವಿಚಾರ ಮುನ್ನೆಲೆಗೆ ಬಂದಿದೆ.
ಪ್ರಣೀತಾ ಶುಕ್ರವಾರವೇ ಸಪ್ತಪದಿ ತುಳಿದಿದ್ದಾರೆ ಎಂಬ ಮಾತೂ ಸಹ ಸಿನಿ ವಲಯದಲ್ಲಿ ಹರಿದಾಡುತ್ತಿದೆ. ಪ್ರಣೀತಾ ಹಾಗೂ ನಿತಿನ್ ರಾಜು ದಂಪತಿ ಅದ್ಧೂರಿ ವಿವಾಹ ಸಮಾರಂಭಕ್ಕೆ ಆಯೋಜಿಸಿದ್ದರು. ಆದರೆ ಕೋವಿಡ್ 2ನೇ ಅಲೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ಆತ್ಮೀಯರು ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ಸಿಂಪಲ್ಲಾಗಿ ವಿವಾಹವಾಗಿದ್ದಾರೆ.
ಪ್ರಣೀತಾ ಪತಿ ನಿತಿನ್ ರಾಜು ಬೆಂಗಳೂರಿನವರು ಎನ್ನಲಾಗಿದೆ. ಆದರೆ ನವಜೋಡಿ ಇಲ್ಲಿಯವರೆಗೆ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ನಟಿ ಪ್ರಣೀತಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಇದ್ದರು. ಹಂಗಾಮಾ 2 ಹಾಗೂ ಭುಜ್ ಸಿನಿಮಾಗಳ ಮೂಲಕ ನಟಿ ಪ್ರಣೀತಾ ಕೆಲ ದಿನಗಳಲ್ಲೇ ಬಾಲಿವುಡ್ ಅಂಗಳಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ರಾಮನ ಅವತಾರ ಎಂಬ ಸಿನಿಮಾದಲ್ಲಿ ರಿಷಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.
https://www.instagram.com/p/CPfMC8yD9EU/?utm_source=ig_web_copy_link