alex Certify BIGGBOSS-10 : ‘ಬಿಗ್ ಬಾಸ್’ ಮನೆಯಿಂದ ನಟಿ ‘ನಮ್ರತಾ ಗೌಡ’ ಔಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGGBOSS-10 : ‘ಬಿಗ್ ಬಾಸ್’ ಮನೆಯಿಂದ ನಟಿ ‘ನಮ್ರತಾ ಗೌಡ’ ಔಟ್..!

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್ ಆದ ಬೆನ್ನಲ್ಲೇ ನಟಿ ನಮ್ರತಾ  ಗೌಡ ಕೂಡ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಟಾಸ್ಕ್ ನಲ್ಲಿ ಉತ್ತಮ ಭಾಗವಹಿಸುವಿಕೆ , ಜಾಣ್ಮೆಯ ಆಟ ಆಡುತ್ತಿದ್ದ ನಟಿ ನಮ್ರತಾ ಎಲ್ಲರನ್ನೂ ಮೋಡಿ ಮಾಡಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಅವರು ಕೂಡ ಹೊರಬಿದ್ದಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೆಲವು ದಿನಗಳ ಹಿಂದೆ ಕಾರ್ತಿಕ್ ಜತೆಗಿನ ಒಡನಾಟ ಸಾಕಷ್ಟು ಚರ್ಚೆಯಲ್ಲಿತ್ತು, ಈ ಬೆನ್ನಲ್ಲೇ ನಮತ್ರಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ತನಿಷಾರ ಮಿಡ್ ವೀಕ್ ಎಲಿಮಿನೇಷನ್ ನಂತರ ನಮ್ರತಾ ಆಟಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಉಳಿದ ಸ್ಪರ್ಧಿಗಳ ಪೈಕಿ ಯಾರು ಬಿಗ್ ಬಾಸ್ ಟ್ರೋಫಿ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ನಾಗಿಣಿ-2 ಧಾರಾವಾಹಿ ಮೂಲಕ ನಟಿ ನಮ್ರತಾ ಗೌಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...