ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಹಾಗೂ ನಿರ್ಮಾಪಕಿ ಲಕ್ಷ್ಮಿ ಮಂಚು ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು, ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಒಂದೊಂದಾಗಿ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಲಕ್ಷ್ಮಿ ಮಂಚು ನಲವತ್ತಾರನೇ ವಯಸ್ಸಿನಲ್ಲೂ ಯುವತಿಯಂತೆ ಕಂಗೊಳಿಸಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ 2008ರಂದು ತೆರೆ ಕಂಡ ‘ದಿ ಓಡ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಇವರು ‘ಜುಮ್ಮಂಡಿ ನಾದಂ’ ಎಂಬ ತೆಲುಗು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ‘ಅನಗನಗ ಓ ಧಿರುಡು’ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ‘ಆದಿಪರ್ವಂ’ ಶೂಟಿಂಗಲ್ಲಿ ನಿರತರಾಗಿದ್ದಾರೆ.