ಕೋವಿಡ್ 19 ಲಸಿಕೆ ಅಭಿಯಾನದ ಕುರಿತಂತೆ ಮುಸ್ಲಿಮರಲ್ಲಿ ಇರುವ ಧಾರ್ಮಿಕ ಆತಂಕಗಳ ವಿಚಾರವಾಗಿ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ರಂತಹ ವ್ಯಕ್ತಿಗಳು ಮುಸ್ಲಿಮರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.
ಕೋವಿಡ್ ಲಸಿಕೆ ವಿಚಾರದಲ್ಲಿ ಮುಸ್ಲಿಮರಿಗೆ ಧಾರ್ಮಿಕ ಆತಂಕಗಳಿವೆ. ಇದೇ ಕಾರಣಕ್ಕಾಗಿ ಲಸಿಕೆ ಸ್ವಲ್ಪ ಮಂದಗತಿಯಲ್ಲಿ ಸಾಗಿತ್ತು. ಆದರೆ ಈಗ ಮುಸ್ಲಿಮರು ಲಸಿಕೆ ಸ್ವೀಕರಿಸುತ್ತಿದ್ದಾರೆ. ಅವರು ಇನ್ನಷ್ಟು ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು ಅಂದರೆ ಸಲ್ಮಾನ್ ಖಾನ್ರಂತಹ ನಟರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
ಬೆಳಗ್ಗೆಯಷ್ಟೇ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಕೋವಿಡ್ 19 ಲಸಿಕೆ ಕುರಿತಂತೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಧಾರ್ಮಿಕ ಮುಖಂಡರು ಹಾಗೂ ಸಲ್ಮಾನ್ ಖಾನ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು.
ಹೆಚ್ಚಿನ ಜನರನ್ನು ಲಸಿಕೆಯತ್ತ ಆಕರ್ಷಿಸುವ ಸಲುವಾಗಿ ನಾವು ಧಾರ್ಮಿಕ ಮುಖಂಡರು ಹಾಗೂ ಸೆಲೆಬ್ರಿಟಿಗಳ ಮೂಲಕ ಲಸಿಕೆ ಜಾಗೃತಿ ಮೂಡಿಸಲು ಇಚ್ಛಿಸಿದ್ದೇವೆ. ಸಲ್ಮಾನ್ ಖಾನ್ರಂತಹ ಸೆಲೆಬ್ರಿಟಿಗಳು ಈ ಜಾಗೃತಿ ಅಭಿಯಾನದ ಪಾಲುದಾರರಾಗಲಿ ಎಂದು ಮಾತುಕತೆ ನಡೆಸುತ್ತಿದ್ದೇವೆ ಅಂತಾ ರಾಜೇಶ್ ಹೇಳಿದ್ದಾರೆ.