alex Certify ʼಸಾಮಿ ಸಾಮಿʼ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿದ ಪೋರಿ; ವಿಡಿಯೋ ನೋಡಿ ಫಿದಾ ಆದ ನಟಿ ರಶ್ಮಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಾಮಿ ಸಾಮಿʼ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿದ ಪೋರಿ; ವಿಡಿಯೋ ನೋಡಿ ಫಿದಾ ಆದ ನಟಿ ರಶ್ಮಿಕಾ

‘ ಪುಷ್ಪ‘ ಸಿನೆಮಾದಲ್ಲಿ ‘ಸಾಮಿ….. ಸಾಮಿ……‘ ಹಾಡಿಗೆ ಬಿಂದಾಸ್ ಸ್ಟೆಪ್ ಹಾಕಿ ನಟಿ ರಶ್ಮಿಕಾ ಮಂದಣ್ಣ ಅನೇಕರ ಹೃದಯಕ್ಕೆ ಕನ್ನ ಹಾಕಿದ್ದರು. ಈಗ ಇದೇ ಹಾಡಿಗೆ ಸ್ಟೆಪ್ ಹಾಕಿದ ಪೋರಿಯನ್ನ ನೋಡಿ ಖುದ್ದು ರಶ್ಮಿಕಾ ಮಂದಣ್ಣ ಅವರೇ ಫಿದಾ ಆಗಿ ಹೋಗಿದ್ದಾರೆ.

ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪುಟ್ಟ ಬಾಲಕಿ ಸಾಮಿ-ಸಾಮಿ ಹಾಡಿಗೆ ಸ್ಟೆಪ್ ಹಾಕುವ ವಿಡಿಯೋ ಶೇರ್ ಮಾಡಿಕೊಂಡಿರೊ ರಶ್ಮಿಕಾ ಇದಕ್ಕೆ ‘ ಇದು ನನ್ನ ದಿನವನ್ನ ಅದ್ಭುತವನ್ನಾಗಿಸಿದೆ. ನಾನು ಕ್ಯೂಟಿಯನ್ನ ಭೇಟಿಯಾಗಬೇಕು ‘ಅಂತ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಶಾಲೆಯ ಕಾರ್ಯಕ್ರಮವೊಂದರಲ್ಲಿ ಪುಟ್ಟ ಬಾಲಕಿ ಸಾಮಿ-ಸಾಮಿ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ಆಕೆ ಒಬ್ಬಳೇ ಅಲ್ಲ ಅಲ್ಲಿದ್ದ ಪುಟ್ಟ ಪುಟ್ಟ ವಿದ್ಯಾರ್ಥಿಗಳೆಲ್ಲ ಈ ಹಾಡಿಗೆ ಡಾನ್ಸ್ ಮಾಡುವುದನ್ನ ಗಮನಿಸಬಹುದು. ಆದರೆ ಈ ಬಾಲಕಿ ಮಾಡುತ್ತಿದ್ದ ಡಾನ್ಸ್ ಮಾತ್ರ ಅದ್ಭುತವಾಗಿತ್ತು.

ಈ ಡಾನ್ಸ್ ವಿಡಿಯೋ ನೋಡ್ತಿದ್ರೆ ಕೇವಲ ರಶ್ಮಿಕಾ ಮಾತ್ರ ಅಲ್ಲ ಎಂಥವರೂ ಕೂಡಾ ಫಿದಾ ಆಗುವ ಹಾಗಿದೆ. ಕೆಲ ನೆಟ್ಟಿಗರಂತೂ ಈ ಪೋರಿ ರಶ್ಮಿಕಾಗಿಂತಲೂ ಚೆನ್ನಾಗಿ ನೃತ್ಯ ಮಾಡಿದ್ದಾಳೆ ಅಂತ ಕಾಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಅಮಿತಾಬ್ ಬಚ್ಚನ್ ಅವರ ಜೊತೆ ಹಿಂದಿ ಚಿತ್ರ ‘ಗುಡ್ ಬೈ.‘ ಸಿನೆಮಾದಲ್ಲಿ ನಟಿಸಿದ್ದಾರೆ. ವಿಕಾಸ್ ಬಹ್ಲ್ ಅವರ ನಿರ್ದೇಶನದ ಸಿನೆಮಾ ಇದಾಗಿದ್ದು. ಇದರಲ್ಲಿ ನೀನಾ ಗುಪ್ತಾ ಅವರು ಸಹ ನಟಿಸಿದ್ದಾರೆ. ಹಾಸ್ಯ ಪ್ರಧಾನ ಸಿನೆಮಾ ಇದಾಗಿದ್ದು ಅಕ್ಟೊಬರ್ 7ರಂದು ಈ ಸಿನೆಮಾ ಬಿಡುಗಡೆಯಾಗಲಿದೆ.

ಇನ್ನೂ ಪುಷ್ಪ- 2 ಸಿನೆಮಾದಲ್ಲೂ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...