![](https://kannadadunia.com/wp-content/uploads/2024/01/4b89c442-459f-4799-97e9-c56285364fc1-1024x613.jpg)
ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ ಆರ್ ಪೇಟೆ ಅಭಿನಯದ ‘ನಾನು ಮತ್ತು ಗುಂಡ’ ಸಿನಿಮಾ 2020ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಇದೀಗ ಈ ಚಿತ್ರದ ಮತ್ತೊಂದು ಭಾಗ ತೆರೆ ಮೇಲೆ ಬರುತ್ತಿದ್ದು, ರಾಕೇಶ್ ಅಡಿಗ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಟ ರಾಕೇಶ್ ಅವರಿಗೆ ಸ್ವಾಗತ ಕೋರಿದೆ.
ರಾಘು ಹಸನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪೊಯಮ್ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ತನ್ವಿಕ್ ಅವರ ಛಾಯಾಗ್ರಹಣವಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ.
![](https://kannadadunia.com/wp-content/uploads/2024/01/4de09c22-2330-46cf-802a-27844a9f0ec3-694x1024.jpg)