alex Certify ಮೈಸೂರಿನ ಸ್ವಚ್ಚತಾ ರಾಯಭಾರಿಯಾಗಿ ನಟ ‘ಮಂಡ್ಯ ರಮೇಶ್’ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರಿನ ಸ್ವಚ್ಚತಾ ರಾಯಭಾರಿಯಾಗಿ ನಟ ‘ಮಂಡ್ಯ ರಮೇಶ್’ ಆಯ್ಕೆ

ಮೈಸೂರು : ಮೈಸೂರಿನ ಸ್ವಚ್ಚತಾ ರಾಯಭಾರಿಯಾಗಿ ನಟ ಮಂಡ್ಯ ರಮೇಶ್ ಆಯ್ಕೆಯಾಗಿದ್ದಾರೆ.
ಸ್ವಚ್ಚತಾ ಅಭಿಯಾನದಲ್ಲಿ ನಂಬರ್ 1 ಸ್ಥಾನ ಪಡೆಯಲು ಮೈಸೂರು ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಸ್ವಚ್ಚತಾ ರಾಯಭಾರಿಯಾಗಿ ನಟ ಮಂಡ್ಯ ರಮೇಶ್ ಗೆ ಅಧಿಕೃತ ಆಹ್ವಾನ ನೀಡಿದೆ.

ಇದಕ್ಕೆ ನಟ ಮಂಡ್ಯ ರಮೇಶ್ ಕೂಡ ಒಪ್ಪಿಗೆ ಸೂಚಿಸಿದ್ದು, ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆ ನೀಡಿದ್ದಾರೆ.ಮೇಯರ್ ಶಿವಕುಮಾರ್ ನೇತೃತ್ವದ ನಿಯೋಗ ದಟ್ಟಗಳ್ಳಿಯಲ್ಲಿರುವ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ರಾಯಭಾರಿಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ, ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಮಂಡ್ಯ ರಮೇಶ್ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇಪಿಸಲಾಗುವುದು. ಅಲ್ಲದೆ, ನಾನು ಕೂಡ ಫೀಲ್ಡ್ಗಿಳಿದು ಮೈಸೂರಿನ ಜನತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇನೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...