alex Certify ‘Kiccha 46’ Teaser : ನಾನು ಮನುಷ್ಯನಲ್ಲ ರಾಕ್ಷಸ : ‘ಕಿಚ್ಚ 46’ ರಗಡ್ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘Kiccha 46’ Teaser : ನಾನು ಮನುಷ್ಯನಲ್ಲ ರಾಕ್ಷಸ : ‘ಕಿಚ್ಚ 46’ ರಗಡ್ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ( Actor Sudeep ) ಅಭಿನಯದ 46 ನೇ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕುತೂಹಲವಿದೆ. ಸದ್ಯ, ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ನಟ ಸುದೀಪ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಬಹಳ ಅದ್ದೂರಿಯಾಗಿ ಟೀಸರ್ ರಿಲೀಸ್ ಆಗಿದ್ದು, ನಾನು ಮನುಷ್ಯ ಅಲ್ಲ, ನಾನು ರಾಕ್ಷಸ ಎಂದು ಟೀಸರ್ ನ ಕೊನೆಯಲ್ಲಿ ಸುದೀಪ್ ಡೈಲಾಗ್ ಹೇಳಿದ್ದಾರೆ. ಈ ಮೂಲಕ ಸುದೀಪ್ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಹೊಸ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಿಸುತ್ತಿದ್ದು ಚಿತ್ರದ ಪಾತ್ರ ವರ್ಗದ ಬಗ್ಗೆ ಮಾಹಿತಿ ಹೊರ ಬಿದ್ದಿಲ್ಲ. ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆ ಬಳಿಕ ಅವರು ಒಂದು ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್ ನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಬ್ಯುಸಿಯಾಗಿದ್ದರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಇದೀಗ ತಮ್ಮ 46 ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...