ದಸರಾ ಹಬ್ಬದ ಹೊಸ್ತಿಲಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇಗುಲಗಳ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಬಂಪರ್ ಕೊಡುಗೆಯನ್ನು ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಕಲ ಸಮೃದ್ಧಿ ಪ್ರಾಪ್ತಿಗಾಗಿ ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…!
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿಕಲಾ ಜೊಲ್ಲೆ, ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳ ಅರ್ಚಕರು ಹಾಗೂ ನೌಕರರ ಆರೋಗ್ಯ ರಕ್ಷಣೆ ಜವಾಬ್ದಾರಿ ಇಲಾಖೆಗೆ ಸೇರಿದ್ದು ಹೀಗಾಗಿ ವಿಶೇಷ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ನೂತನ ಯೋಜನೆಯಿಂದ ಮುಜರಾಯಿ ಇಲಾಖೆ 37 ಸಾವಿರ ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ರು.
ತಂದೆಯನ್ನು ಪೈಲಟ್ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!
5ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆಯುತ್ತಿದ್ದ ಅರ್ಚಕರು ಹಾಗೂ ದೇಗುಲ ನೌಕರರು 6ನೇ ವೇತನ ಆಯೋಗಕ್ಕಾಗಿ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ ಬಳಿಕ ಆರನೇ ವೇತನ ಆಯೋಗವನ್ನು ಇವರಿಗೆ ಕೊಡಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ.
ದೇಗುಲದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ 35 ಪ್ರತಿಶತ ಮೀರದಂತೆ ಇವರನ್ನು ಆರನೇ ವೇತನ ಆಯೋಗಕ್ಕೆ ಸೇರಿಸಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ ಎಂದು ಹೇಳಿದ್ರು.