ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಮೀಮ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಮಾತಿನ ಏಟು ನೀಡಿದ್ದಾರೆ. ಬಿಜೆಪಿಯ “ಅಚ್ಛೇ ದಿನ್” ಎಂಬ ಪಕ್ಷದ ಘೋಷಣೆಯನ್ನು ಮೀಮ್‌ನೊಂದಿಗೆ ಲೇವಡಿ ಮಾಡಿದ್ದಾರೆ ಇಂಗ್ಲಿಷ್ ಪಾರಂಗತ ಸಂಸದ.
ನಾಲ್ಕು ವಿಭಿನ್ನ ರೀತಿಯ ತಲೆನೋವುಗಳನ್ನು ಮೀಮ್‌ನಲ್ಲಿ ಚಿತ್ರಿಸಲಾಗಿದೆ ಮತ್ತು ಅವುಗಳ ತೀವ್ರತೆಯ ಮಟ್ಟವನ್ನು ಕೆಂಪು ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ.
ಇಲ್ಲಿದೆ 2022 ರ ಅತ್ಯಂತ ಜನಪ್ರಿಯ ಹಾಗೂ ಮೊದಲ ಮೀಮ್
“ಅಚ್ಛೇ ದಿನ್”- 2014 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಕ್ಷದ ಘೋಷಣೆಯು ಭಾರತದಾದ್ಯಂತ ಪ್ರತಿಧ್ವನಿಸುತ್ತಿದೆ. 2014 ರಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಪದಗುಚ್ಛವನ್ನು ಬಳಸಲು ಪ್ರಾರಂಭಿಸಿದರು.
‘ಕಾಂಗ್ರೆಸ್-ಮುಕ್ತ್ ಭಾರತ’ (ಕಾಂಗ್ರೆಸ್ ಮುಕ್ತ ಭಾರತ) ಎಂಬ ಬಿಜೆಪಿಯ ಘೋಷವಾಕ್ಯದ ವಿರುದ್ಧ ಸಖತ್ ವ್ಯಂಗ್ಯ ಮಾಡಿದ ತರೂರ್, ಅದು ಈಗ “ಕಾಂಗ್ರೆಸ್-ಯುಕ್ತ ಬಿಜೆಪಿ” (ಕಾಂಗ್ರೆಸ್ ಬೆಂಬಲಿತ ಬಿಜೆಪಿ) ಎಂದು ಹೇಳಿದರು. ಕಾಂಗ್ರೆಸ್ ನಾಯಕ ಆರ್‌ಪಿಎನ್ ಸಿಂಗ್ ಮಂಗಳವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ನಂತರ ತರೂರರ ಈ ಟ್ವೀಟ್ ಬಂದಿದೆ.
ಅಷ್ಟಾಗಿ ಪ್ರಚಲಿತವಲ್ಲದೇ ಇರುವ ಇಂಗ್ಲಿಷ್ ಪದಗಳನ್ನು ಹಂಚಿಕೊಳ್ಳುವ ಮೂಲಕ ಹೆಸರುವಾಸಿಯಾದ ತರೂರ್ ಅವರು ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ಮಾತನಾಡುವಾಗ ‘ದಿನದ ಪದ’, ಅಪಭ್ರಂಶಗಳನ್ನು ಚೆನ್ನಾಗಿ ಹಂಚಿಕೊಳ್ಳುತ್ತಾರೆ.