ಭೋಪಾಲ್ ನ ರೈಲ್ವೆ ನಿಲ್ದಾಣದ ಕೂಲಿ ಕಾರ್ಮಿಕರಿಗೆ ಹವಾನಿಯಂತ್ರಿತ ವಿಶ್ರಾಂತಿ ಗೃಹಗಳು ನಿರ್ಮಾಣವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಜಿಲ್ಲಾಧಿಕಾರಿ ಅವಿನಾಶ್ ಲಾವಣೀಯ, ರೈಲ್ವೆ ವ್ಯವಸ್ಥಾಪಕ ಸೌರಭ್ ಬಂಡೋಪಾಧ್ಯಾಯ, ಭೋಪಾಲ್ ಮುನ್ಸಿಪಲ್ ಆಯುಕ್ತ ಕೆವಿಎಸ್ ಚೌಧರಿ ಅವರು ಈ ಬಗ್ಗೆ ಚರ್ಚೆ ನಡೆಸಿ ವಿಶ್ರಾಂತಿ ಗೃಹಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
BIG BREAKING: ರೆಪೋ ದರ ಹೆಚ್ಚಿಸಿದ RBI; ತಕ್ಷಣದಿಂದಲೇ ಅನ್ವಯ ಎಂದ ಶಕ್ತಿಕಾಂತ್ ದಾಸ್
ರೈಲ್ವೆ ಕೂಲಿ ಕಾರ್ಮಿಕರಿಗೆ ನಿರ್ಮಿಸಲುದ್ದೇಶಿಸಿರುವ ಎಸಿ ವಿಶ್ರಾಂತಿ ಕೊಠಡಿಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ರೈಲ್ವೆ ಜಾಗದಲ್ಲಿ ಈ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕೂಲಿಕಾರ್ಮಿಕರು ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಸಾರಂಗ್ ತಿಳಿಸಿದ್ದಾರೆ. ಕೂಲಿ ಕಾರ್ಮಿಕರಿಗೆ ಎಸಿ ಕೊಠಡಿ ನಿರ್ಮಾಣವಾಗುತ್ತಿರುವುದು ದೇಶದಲ್ಲಿ ಇದೇ ಮೊದಲು.