ಸ್ಪೂರ್ತಿದಾಯಕವಾಗಿದೆ ಈ ಮಹಿಳಾ ಪೊಲೀಸ್ ಅಧಿಕಾರಿಯ ʼಯಶೋಗಾಥೆʼ 28-06-2021 12:24PM IST / No Comments / Posted In: Latest News, India, Live News ಕುಟುಂಬಸ್ಥರ ವಿರೋಧದೊಂದಿಗೆ ಮದುವೆಯಾಗಿದ್ದರೂ ಸಹ ಕೇವಲ 18 ವರ್ಷಕ್ಕೇ ಪತಿ ಕೈಕೊಟ್ಟಿದ್ದ. ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರನಡೆದ ಆನಿ ಶಿವ ಕೇರಳದ ವಾರ್ಕಳದಲ್ಲಿ ಐಸ್ ಕ್ರೀಂ ಹಾಗೂ ನಿಂಬು ಪಾನಕಗಳನ್ನ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಆದರೆ ಈ ಯಾವುದೇ ಸವಾಲುಗಳು ಆಕೆಯ ಗುರಿಮುಟ್ಟುವ ಪ್ರಯತ್ನಕ್ಕೆ ತೊಡಕಾಗಲಿಲ್ಲ. ಸತತ ಪರಿಶ್ರಮದ ಬಳಿಕ ಇದೀಗ ಆಕೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಆನಿ ಶಿವಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಕೇರಳ ಪೊಲೀಸ್ ಇಲಾಖೆ, ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸಕ್ಕೆ ಇವರು ನಿಜವಾದ ಮಾದರಿ. ಕುಟುಂಬಸ್ಥರು ಹಾಗೂ ಪತಿಯಿಂದ ತ್ಯಜಿಸಲ್ಪಟ್ಟು ಆರು ತಿಂಗಳ ಮಗುವಿನ ಜೊತೆ ಬೀದಿಗೆ ಬಂದಿದ್ದ ಈ ಯುವತಿ ಇಂದು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ ಎಂದು ಬರೆಯಲಾಗಿದೆ. ಎಲ್ಲಾ ಅಡೆತಡೆಗಳನ್ನ ಎದುರಿಸಿ ಇದೀಗ ಆನಿ ಶಿವ ವಾರ್ಕಳ ಠಾಣೆಯಲ್ಲಿಯೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನನಗೆ ನಾನು ವಾರ್ಕಳ ಠಾಣೆಯಲ್ಲಿಯೇ ಸೇವೆ ಸಲ್ಲಿಸಲಿದ್ದೇನೆ ಎಂಬ ವಿಚಾರ ತಿಳಿಯಿತು. ಪುಟ್ಟ ಕಂದಮ್ಮನನ್ನ ಹಿಡಿದು ನಾನು ಕಣ್ಣೀರು ಹಾಕುತ್ತಿದ್ದ ಸ್ಥಳವಿದು ಎಂದು ಶಿವಾ ಹೇಳಿದ್ದಾರೆ. A true model of will power and confidence… An 18-year-old girl who was left on the streets with her 6-month-old baby after being abandoned by her husband and family has become #subinspector @Varkalapolicestation.#keralapolice #AnieSiva pic.twitter.com/AM0CnhETrz — Kerala Police (@TheKeralaPolice) June 27, 2021