ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಶಾಸಕ ನರೇಶ್ ಬಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ಮನೆಯ ಮುಂದೆ ಜಮಾಯಿಸಿದ್ದರು.
ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಬಗ್ಗೆ ಆರೋಪ ಹೊರಿಸಿ ಪಕ್ಷದಿಂದ ದೂರ ಉಳಿದಿರುವ ಕುಮಾರ್ ವಿಶ್ವಾಸ್ ಮನೆಯ ಮುಂದೆ ನೆರೆದ ಅವರು, ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿನ ಗೆಲುವನ್ನು ಅಲ್ಲೇ ಸಂಭ್ರಮಿಸಿದ್ದಾರೆ. ಸಂಭ್ರಮದಲ್ಲಿ ನೆರೆದಿದ್ದವರು ಆಮ್ ಆದ್ಮಿ ಪಾರ್ಟಿ ಜಿಂದಾಬಾದ್, ಅರವಿಂದ್ ಕೇಜ್ರಿವಾಲ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿ, ಸಿಹಿ ಹಂಚಿದ್ದಾರೆ.
ಆಪ್ ಗೆಲುವನ್ನು ಸಂಭ್ರಮಿಸಲು ಮರಳಿದ ʼಬೇಬಿ ಕೇಜ್ರಿವಾಲ್ʼ ; ಭಗವಂತ್ ಮಾನ್ ಅವ್ರಂತೆ ತಯಾರಾದ ಪುಟಾಣಿ
ಈ ಹಿಂದೆ ಎಎಪಿಯ ಸದಸ್ಯ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾಗಿದ್ದ ಕುಮಾರ್ ವಿಶ್ವಾಸ್ ಅವರು 2018ರಲ್ಲಿ ಪಕ್ಷದೊಂದಿಗೆ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿದ್ದರು. 2022 ರ ಅಸೆಂಬ್ಲಿ ಚುನಾವಣೆಯ ಪೂರ್ವದಲ್ಲಿ, ಅರವಿಂದ್ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿದ್ದಾರೆ ಎಂಬ ಆರೋಪ ಮಾಡಿದ್ದರು. ಹೀಗಾಗಿ ಆಪ್ ನಾಯಕ ಹಾಗೂ ಕಾರ್ಯಕರ್ತರು ಅವರ ಮನೆ ಮುಂದೆ ಈ ರೀತಿಯಾಗಿ ನಡೆದುಕೊಂಡಿದ್ದಾರೆ.