alex Certify ಆರ್ಥಿಕ ಸಂಕಷ್ಟದಲ್ಲಿ ʼಲಗಾನ್ʼ​​ ನಟಿ; ಸಹಾಯಕ್ಕಾಗಿ ಅಮೀರ್​ ಖಾನ್​ ಬಳಿ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಂಕಷ್ಟದಲ್ಲಿ ʼಲಗಾನ್ʼ​​ ನಟಿ; ಸಹಾಯಕ್ಕಾಗಿ ಅಮೀರ್​ ಖಾನ್​ ಬಳಿ ಮನವಿ

ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಕಲಾವಿದರು ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ ಆಮಿರ್​ ಖಾನ್​ ಮುಖ್ಯ ಭೂಮಿಕೆಯ ಸಿನಿಮಾ ಲಗಾನ್​​ನಲ್ಲಿ ನಟಿಸಿದ್ದ ಪರ್ವೀಣಾ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಸ್ಟ್ರೋಕ್​ಗೆ ಒಳಗಾಗಿದ್ದ ಪರ್ವೀಣಾ ತೀವ್ರ ಸಂಕಷ್ಟದಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಪರ್ವೀಣಾ, ಆಮೀರ್​ ಖಾನ್​ಗೆ ನನ್ನ ಈ ಸಂಕಷ್ಟದ ಬಗ್ಗೆ ಮಾಹಿತಿಯಿಲ್ಲ. ಇಲ್ಲವಾದಲ್ಲಿ ಅವರು ನನಗೆ ಖಂಡಿತವಾಗಿಯೂ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ನನ್ನ ಅನಾರೋಗ್ಯದ ಬಗ್ಗೆ ಆಮಿರ್​ ಸಹೋದರನಿಗೆ ಮಾಹಿತಿಯಿಲ್ಲ. ಅವರಿಗೆ ತಿಳಿದಿದ್ದರೆ ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತಿದ್ದರು. ಆಮೀರ್​ ಖಾನ್​ ತಮ್ಮ ಸಹ ನಟ ಶ್ರೀ ವಲ್ಲಭ್​ ವ್ಯಾಸ್​ಗೂ ಸಹಾಯ ಮಾಡಿದ್ದರು. ಆದರೆ ನನಗೆ ಸಹಾಯ ಬೇಡ, ಅವರ ಕಚೇರಿಯಲ್ಲಿ ನನಗೊಂದು ಕೆಲಸ ಸಿಕ್ಕರೆ ಸಾಕು ಎಂದು ಪರ್ವೀಣಾ ಹೇಳಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಆಮೀರ್​ ಖಾನ್​ ಸಾಕಷ್ಟು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಪರ್ವೀಣಾ ಕಳೆದ ವರ್ಷ ಅಕ್ಷಯ್​ ಕುಮಾರ್​ ಹಾಗೂ ಸಿನಿ & ಟಿವಿ ಕಲಾವಿದರ ಅಸೋಸಿಯೇಷನ್​ನಿಂದ ಸಹಾಯ ಪಡೆದಿದ್ದರು. ಈ ವರ್ಷ ಸೋನು ಸೂದ್​ ಕೂಡ ಸಹಾಯ ಹಸ್ತ ಚಾಚಿದ್ದರು.

2001ರಲ್ಲಿ ತೆರೆ ಕಂಡ ಲಗಾನ್​ ಸಿನಿಮಾ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಈಗಲೂ ಕೂಡ ಬಾಲಿವುಡ್​ ಐಕಾನಿಕ್​ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಅಶುತೋಷ್​ ಗೋವರಿಕರ್​ ಈ ಸಿನಿಮಾಗೆ ಕತೆ ಹೆಣೆದು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಪರ್ವೀಣಾ ಗ್ರಾಮಸ್ಥರಾಗಿ ಪಾತ್ರ ನಿಭಾಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...