ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಕಲಾವಿದರು ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ತಿದ್ದಾರೆ. ಅದೇ ರೀತಿ ಬಾಲಿವುಡ್ ನಟ ಆಮಿರ್ ಖಾನ್ ಮುಖ್ಯ ಭೂಮಿಕೆಯ ಸಿನಿಮಾ ಲಗಾನ್ನಲ್ಲಿ ನಟಿಸಿದ್ದ ಪರ್ವೀಣಾ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಸ್ಟ್ರೋಕ್ಗೆ ಒಳಗಾಗಿದ್ದ ಪರ್ವೀಣಾ ತೀವ್ರ ಸಂಕಷ್ಟದಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಪರ್ವೀಣಾ, ಆಮೀರ್ ಖಾನ್ಗೆ ನನ್ನ ಈ ಸಂಕಷ್ಟದ ಬಗ್ಗೆ ಮಾಹಿತಿಯಿಲ್ಲ. ಇಲ್ಲವಾದಲ್ಲಿ ಅವರು ನನಗೆ ಖಂಡಿತವಾಗಿಯೂ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ನನ್ನ ಅನಾರೋಗ್ಯದ ಬಗ್ಗೆ ಆಮಿರ್ ಸಹೋದರನಿಗೆ ಮಾಹಿತಿಯಿಲ್ಲ. ಅವರಿಗೆ ತಿಳಿದಿದ್ದರೆ ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತಿದ್ದರು. ಆಮೀರ್ ಖಾನ್ ತಮ್ಮ ಸಹ ನಟ ಶ್ರೀ ವಲ್ಲಭ್ ವ್ಯಾಸ್ಗೂ ಸಹಾಯ ಮಾಡಿದ್ದರು. ಆದರೆ ನನಗೆ ಸಹಾಯ ಬೇಡ, ಅವರ ಕಚೇರಿಯಲ್ಲಿ ನನಗೊಂದು ಕೆಲಸ ಸಿಕ್ಕರೆ ಸಾಕು ಎಂದು ಪರ್ವೀಣಾ ಹೇಳಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಆಮೀರ್ ಖಾನ್ ಸಾಕಷ್ಟು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಪರ್ವೀಣಾ ಕಳೆದ ವರ್ಷ ಅಕ್ಷಯ್ ಕುಮಾರ್ ಹಾಗೂ ಸಿನಿ & ಟಿವಿ ಕಲಾವಿದರ ಅಸೋಸಿಯೇಷನ್ನಿಂದ ಸಹಾಯ ಪಡೆದಿದ್ದರು. ಈ ವರ್ಷ ಸೋನು ಸೂದ್ ಕೂಡ ಸಹಾಯ ಹಸ್ತ ಚಾಚಿದ್ದರು.
2001ರಲ್ಲಿ ತೆರೆ ಕಂಡ ಲಗಾನ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಈಗಲೂ ಕೂಡ ಬಾಲಿವುಡ್ ಐಕಾನಿಕ್ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಅಶುತೋಷ್ ಗೋವರಿಕರ್ ಈ ಸಿನಿಮಾಗೆ ಕತೆ ಹೆಣೆದು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಪರ್ವೀಣಾ ಗ್ರಾಮಸ್ಥರಾಗಿ ಪಾತ್ರ ನಿಭಾಯಿಸಿದ್ದರು.