alex Certify ಆದಿತ್ಯ ಠಾಕ್ರೆಯಿಂದ ರಿಯಾಗೆ 44 ಬಾರಿ ಕರೆ ? ಲೋಕಸಭಾ ಸದಸ್ಯ ರಾಹುಲ್ ಶೆವಾಲೆ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಿತ್ಯ ಠಾಕ್ರೆಯಿಂದ ರಿಯಾಗೆ 44 ಬಾರಿ ಕರೆ ? ಲೋಕಸಭಾ ಸದಸ್ಯ ರಾಹುಲ್ ಶೆವಾಲೆ ಆರೋಪ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಶಿವಸೇನೆಯ ಮಾಜಿ ಸಚಿವ ಆದಿತ್ಯ ಠಾಕ್ರೆ ಹೆಸರು ಕೇಳಿಬರ್ತಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ನಟಿ ರಿಯಾ ಚಕ್ರವರ್ತಿ ಅವರಿಗೆ ‘AU’ ಮೊದಲಕ್ಷರಗಳನ್ನು ಹೊಂದಿರುವ ವ್ಯಕ್ತಿಯಿಂದ 44 ಫೋನ್ ಕರೆಗಳನ್ನು ಮಾಡಲಾಗಿದೆ ಎಂದು ಲೋಕಸಭಾ ಸದಸ್ಯ (ಶಿವಸೇನೆಯ ಏಕನಾಥ್‌ ಶಿಂಧೆ ಬಣ) ರಾಹುಲ್ ಶೆವಾಲೆ ತನಿಖೆಗೆ ಒತ್ತಾಯಿಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತಷ್ಟು ಸತ್ಯಗಳು ಹೊರಬರುತ್ತಿದ್ದು, ರಾಜಕೀಯ ವಲಯದಲ್ಲೂ ಸುಶಾಂತ್ ಸಾವು ಪ್ರತಿಧ್ವನಿಸುತ್ತಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಆದಿತ್ಯ ಠಾಕ್ರೆ ಪಾತ್ರವೇನು ಎಂದು ಸಂಸದ ರಾಹುಲ್ ಶಿವಾಲೆ ಪ್ರಶ್ನಿಸಿದ್ದಾರೆ. ಸಿಬಿಐ ತನಿಖೆಯ ಕುರಿತು ಮತ್ತಷ್ಟು ವಿವರ ಕೇಳಿದ ರಾಹುಲ್, ಆದಿತ್ಯ ಠಾಕ್ರೆಯಿಂದ ರಿಯಾ ಚಕ್ರವರ್ತಿ 44 ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಲೋಕಸಭೆಯಲ್ಲಿ ಈ ವಿಷಯದ ಕುರಿತು ಪ್ರಸ್ತಾವಿಸಿದ ರಾಹುಲ್ ಶಿವಾಲೆ, ಆದಿತ್ಯ ಠಾಕ್ರೆಯಿಂದ ರಿಯಾ ಚಕ್ರವರ್ತಿ 44 ಕರೆಗಳನ್ನು ಸ್ವೀಕರಿಸಿದ್ದಾರೆ ಎಂಬುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ. ಸಿಬಿಐ ತನಿಖೆ ಏನು ಹೇಳುತ್ತದೆ? ತನಿಖೆಯ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಶಿಂಧೆ ಶಿಬಿರದ ಭಾಗವಾಗಿರುವ ಶಾಸಕ ಪ್ರತಾಪ್ ಸರ್ನಾಯಕ್ ಅವರು ರಾಹುಲ್ ಶೆವಾಲೆ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ರಾಹುಲ್ ಶಿವಾಲೆ ಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಆದಿತ್ಯ ಠಾಕ್ರೆ, ಪಕ್ಷಕ್ಕೆ ನಿಷ್ಠರಲ್ಲದವರು ಏನು ಬೇಕಾದರೂ ಹೇಳುತ್ತಾರೆ ಒಂದು ರೀತಿಯಲ್ಲಿ ಎಲುಬಿಲ್ಲದ ನಾಲಿಗೆಯಂತೆ, ಇವರು ಏನೂ ಹೇಳಿದರೂ ಅದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಹಾಗೂ ಇಂತಹವರಿಂದ ಹೆಚ್ಚಿನ ನಿರೀಕ್ಷೆ ನನಗಿಲ್ಲ ಎಂದು ತಿಳಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ತನಿಖೆಗೆ ಒತ್ತಾಯಿಸಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ಶಾಸಕರು ಗುರುವಾರ ಮಹಾರಾಷ್ಟ್ರ ವಿಧಾನಸಭೆಯ ಕಲಾಪವನ್ನು ಸ್ಥಗಿತಗೊಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...