ದೇಶವಾಸಿಗಳಿಗೆ ಅತ್ಯಂತ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್‌ನಲ್ಲಿ ನಮ್ಮ ಗುರುತಿಗೆ ಸಂಬಂಧಿಸಿ ಒಂದೇ ಒಂದು ಸಣ್ಣ ತಪ್ಪಿದ್ದರೂ ಸಹ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದು ಕಷ್ಟವಾಗುತ್ತದೆ.
ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಸರಿಯಾದ ಮಾಹಿತಿಯೊಂದಿಗೆ ಇಡುವುದು ಹಾಗೂ ಕಾಲಕಾಲಕ್ಕೆ ವೈಯಕ್ತಿಕ ಮಾಹಿತಿಗಳು ಬದಲಾದಲ್ಲಿ ಅವನ್ನು ಅಪ್ಡೇಟ್ ಮಾಡುವುದು ಬಹಳ ಮುಖ್ಯ.
ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ಇದೀಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜೊತೆಗೆ ಕೈಜೋಡಿಸಿದೆ. ಇದರ ಪರಿಣಾಮ ಆಧಾರ್ ಕಾರ್ಡ್‌ದಾರರು ತಮ್ಮ ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ದಾಖಲೆಯಲ್ಲಿ ಸರಿಪಡಿಸಲು ಮನೆಯಿಂದಲೇ ಅವಕಾಶ ಸಿಕ್ಕಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ
ಇದೀಗ ಅಂಚೆಪೇದೆಯನ್ನು ಮನೆಗೆ ಬರಲು ವಿನಂತಿಸಿ, ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಬೇಕಾದ ವಿವರಗಳನ್ನು ತಿಳಿಸಬಹುದಾಗಿದೆ.
ದೇಶಾದ್ಯಂತ ಇರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 650 ಶಾಖೆಗಳಲ್ಲಿ ಈ ಸೇವೆ ಲಭ್ಯವಿದೆ. ಗ್ರಾಹಕರಿಗೆ ಅವರ ಮನೆಬಾಗಿಲಲ್ಲೇ ಸೇವೆ ನೀಡಲೆಂದು ಐಪಿಪಿಬಿ ಎರಡು ಲಕ್ಷಕ್ಕೂ ಹೆಚ್ಚು ಪೋಸ್ಟ್‌ಮನ್ ಹಾಗೂ ಗ್ರಾಮೀಣ ಅಂಚೆ ಸೇವಕರನ್ನು ನೇಮಕ ಮಾಡಿದೆ.