ನಿಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಸಂಖ್ಯೆಗಳನ್ನು ಖರೀದಿ ಮಾಡಲಾಗಿದೆ ಎಂದು ನಿಮಗೆ ಗೊತ್ತಿದೆಯಾ ?
ಟೆಲಿಕಾಮ್ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಅಂಡ್ ಕನ್ಸ್ಯೂಮರ್ ಪ್ರೊಟೆಕ್ಷನ್ (ಟಾಫ್ಕಾಪ್) ಎಂಬ ಹೊಸ ಪೋರ್ಟಲ್ ಬಿಡುಗಡೆ ಮಾಡಿರುವ ದೂರವಾಣಿ ಇಲಾಖೆ, ತನ್ಮೂಲಕ ಯಾವುದೇ ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಪ್ರಸ್ತುತಪಡಿಸಿ ಎಷ್ಟು ಸಿಮ್ ಖರೀದಿ ಮಾಡಲಾಗಿದೆ ಎಂದು ಅರಿಯಬಹುದಾಗಿದೆ.
ಒಂದು ವೇಳೆ ನಿಮ್ಮಲ್ಲಿರುವ ಸಿಮ್ ಸಂಖ್ಯೆಯೊಂದನ್ನು ಆಧಾರ್ ಪ್ರಸ್ತುತಪಡಿಸದೇ ವಿತರಣೆಯಾಗಿದ್ದು ಕಂಡು ಬಂದಲ್ಲಿ ನೀವು ಅದನ್ನು ವರದಿ ಮಾಡಬಹುದಾಗಿದೆ.
ಈ ಪಾರ್ಕ್ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ
ಭಾರತದ ಯಾವುದೇ ದೂರವಾಣಿ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಪ್ರಸ್ತುತಪಡಿಸಿ 9ರಷ್ಟು ಮೊಬೈಲ್ ಸಂಪರ್ಕಗಳನ್ನು ಪಡೆಯಬಹುದಾಗಿದೆ. ತಮ್ಮ ಹೆಸರಿನಲ್ಲಿ ಖರೀದಿ ಮಾಡಿದ ಸಂಪರ್ಕಗಳ ಬಗ್ಗೆ ವಿಚಾರ ಮಾಡಲೆಂದು ಟಾಫ್ಕಾಪ್ ಪೋರ್ಟಲ್ ಅನ್ನು ದೂರವಾಣಿ ಇಲಾಖೆ ಅಭಿವೃದ್ಧಿಪಡಿಸಿದೆ.
ನಿಮ್ಮ ಆಧಾರ್ ಕಾರ್ಡ್ ವಿರುದ್ಧ ಎಷ್ಟು ಸಿಮ್ ಸಂಖ್ಯೆಗಳನ್ನು ವಿತರಿಸಲಾಗಿದೆ ಎಂದು ಪರೀಕ್ಷಿಸಲು ಹೀಗೆ ಮಾಡಿ:
1. ಟಾಫ್ಕಾಪ್ ಪೋರ್ಟಲ್ https://tafcop.dgtelecom.gov.in/ಗೆ ಭೇಟಿ ನೀಡಿ.
2. ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನೋಂದಾಯಿತವಾದ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ.
3. ಓಟಿಪಿ ಮುಖಾಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಖಾತ್ರಿ ಪಡಿಸಿ, ನಿಮ್ಮ ಅಕೌಂಟ್‌ಗೆ ಸೈನ್-ಇನ್ ಆಗಿ.
4. ನಿಮ್ಮ ಅಕೌಂಟ್ ಪೇಜ್‌ನಲ್ಲಿ, ನಿಮ್ಮ ಆಧಾರ್ ಕಾರ್ಡ್ ವಿರುದ್ಧ ವಿತರಿಸಲಾದ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ನೋಡಬಹುದಾಗಿದೆ.
ಇದೇ ಪೇಜ್‌ನಲ್ಲಿ, ನೀವು ಸದ್ಯಕ್ಕೆ ಬಳಸದೇ ಇರುವ ಸಂಖ್ಯೆಗಳನ್ನು ಬ್ಲಾಕ್ ಮಾಡುವ ಆಯ್ಕೆ ಇರುತ್ತದೆ. ಸದ್ಯದ ಮಟ್ಟಿಗೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ದೂರವಾಣಿ ಚಂದಾದಾರು ಟಾಫ್ಕಾಪ್ ಪೋರ್ಟಲ್ ಬಳಸಬಹುದಾಗಿದೆ.