14 ಅಂಕಿಗಳ ಆಧಾರ್ ಸಂಖ್ಯೆ ದೇಶದ ಮಹತ್ವದ ಗುರುತಿನ ದಾಖಲೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಂಕ್ ವ್ಯವಹಾರ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಇರಲೇಬೇಕು.
ಇದೊಂದು ವಿಶಿಷ್ಟ ಗುರುತಿನ ಸಂಖ್ಯೆಯೂ ಹೌದು. ಸುಮಾರು 130 ಕೋಟಿ ಪ್ರಜೆಗಳದ್ದೂ ಕೂಡ ವಿಶಿಷ್ಟವಾದ ಸಂಖ್ಯೆ ಇದೆ.
ಇದರ ಮತ್ತೊಂದು ವಿಶೇಷವೆಂದರೆ, ಪಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಪರವಾನಗಿ ಮಾದರಿಯಲ್ಲಿ ಈ ಕಾರ್ಡನ್ನು ಜತೆಯಲ್ಲೇ ಸದಾಕಾಲ ಇರಿಸಿಕೊಳ್ಳುವ ಅಗತ್ಯವೇ ಇಲ್ಲ. ಸ್ಮಾರ್ಟ್‌ಫೋನ್ ಇದ್ದರೆ, 10 ನಿಮಿಷದಲ್ಲಿ ನಿಮ್ಮ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಇರುವ ಕಡೆಯಲ್ಲಿ ಪ್ರಿಂಟ್ ತೆಗೆದುಕೊಂಡು ದಾಖಲೆಗಾಗಿ ನೀಡಬಹುದಾಗಿದೆ. ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವೆಬ್‌ಸೈಟ್‌ನಲ್ಲಿ ಇಂಥ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮೊದಲು ‘ https://uidai.gov.in/ ‘ ವೆಬ್ ಸೈಟ್‌ಗೆ ಭೇಟಿ ನೀಡಿರಿ.
ನಿಮ್ಮ ಪೂರ್ಣ ಹೆಸರು, ಪಿನ್‌ಕೋಡ್ ಅಥವಾ 14 ಅಂಕಿಗಳ ಆಧಾರ್ ಸಂಖ್ಯೆ ಜ್ಞಾಪಕವಿದ್ದಲ್ಲಿ ನಮೂದಿಸಿರಿ.
ಒಂದು ಒಟಿಪಿಯು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರಲಿದೆ. ಅದನ್ನು ಪರಿಶೀಲನಾ ಉದ್ದೇಶಕ್ಕಾಗಿ ಬಳಸಿಕೊಂಡು, ವೆಬ್‌ಸೈಟ್‌ನಲ್ಲಿ ನಮೂದಿಸಬೇಕಾಗುತ್ತದೆ. ಕೂಡಲೇ ನಿಮ್ಮ ‘ ಇ-ಆಧಾರ್ ಪ್ರತಿ ‘ ಡೌನ್‌ಲೋಡ್‌ಗೆ ಸಿದ್ಧವಾಗುತ್ತದೆ.
SHOCKING: ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಹಲ್ಲೆಗೊಳಗಾದ ಮಹಿಳೆಗೆ ಗರ್ಭಪಾತ
ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಂ-ಆಧಾರ್ ಆ್ಯಪ್ ಮೂಲಕ ಕೂಡ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕೂ ಕೂಡ ಒಟಿಪಿ ಅಗತ್ಯವಾಗಿದೆ. ಹಾಗಾಗಿ ಯುಐಡಿಎಐ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯುಳ್ಳ ಸಿಮ್ ನಿಮ್ಮ ಬಳಿ ಇಟ್ಟುಕೊಂಡಿರಿ.