alex Certify ʼಆಧಾರ್‌ʼ ನಲ್ಲಿರುವ ನಿಮ್ಮ ಫೋಟೋ ಬದಲಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್‌ʼ ನಲ್ಲಿರುವ ನಿಮ್ಮ ಫೋಟೋ ಬದಲಿಸಲು ಹೀಗೆ ಮಾಡಿ

ಸರ್ಕಾರದ ಯಾವುದೇ ಸೇವೆಗಳನ್ನು ಪಡೆಯಬೇಕಾದಲ್ಲಿ ಇರಲೇ ಬೇಕಾದ ಗುರುತಿನ ದಾಖಲೆಯಾದ ಆಧಾರ್‌ ಕಾರ್ಡ್‌ ಹಾಗೂ ಅದರಲ್ಲಿರುವ 12 ಅಂಕಿಯ ಗುರುತಿನ ಸಂಖ್ಯೆಯು ಪ್ರತಿಯೊಬ್ಬ ದೇಶವಾಸಿಯ ದಿನನಿತ್ಯದ ಬದುಕಿನ ಅತ್ಯಗತ್ಯ ವಿಚಾರವಾಗಿದೆ.

ಬಹುತೇಕ ದೇಶವಾಸಿಗಳು ಆಧಾರ್‌ ಸೇವೆಗೆ ಭಾರತ ಸರ್ಕಾರ ಚಾಲನೆ ಕೊಡುತ್ತಲೇ ಪಡೆದುಕೊಂಡಿದ್ದಾರೆ. ಹೀಗಾಗಿ ಈಗ ಬಹಳಷ್ಟು ಆಧಾರ್‌ ಕಾರ್ಡ್‌ದಾರರ ಮುಖಗಳು ಕಾರ್ಡ್‌ಗಳಲ್ಲಿ ಗುರುತೇ ಸಿಗದಂತೆ ಇವೆ.

ಹೀಗಾಗಿ ಆಧಾರ್‌ ಕಾರ್ಡ್‌ಗಳಲ್ಲಿರುವ ಫೋಟೋಗಳನ್ನು ಆನ್ಲೈನ್ ಮೂಲಕ ಪರಿಷ್ಕರಿಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅನುಮತಿ ಕೊಟ್ಟಿದೆ. ಇದಕ್ಕಾಗಿ ನೀವು ತೆಗೆದುಕೊಳ್ಳಬೇಕಾದ ಕ್ರಮಗಳು ಇಂತಿವೆ:

1. ಯುಐಡಿಎಐನ ಅಧಿಕೃತ ಜಾಲತಾಣದಿಂದ ಆಧಾರ್‌ ನೋಂದಣಿ ಅರ್ಜಿ ಡೌನ್ಲೋಡ್ ಮಾಡಿ.

2. ಅರ್ಜಿಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.

3. ಹತ್ತಿರದ ಆಧಾರ್‌ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.

4. ಆಧಾರ್‌ ನೋಂದಣಿದಾರರಿಗೆ ನಿಮ್ಮ ಅರ್ಜಿ ಸಲ್ಲಿಸಿ.

5. ಬಯೋಮೆಟ್ರಿಕ್ ಪರಿಶೀಲನೆ ಮೂಲಕ ನಿಮ್ಮ ವಿವರಗಳನ್ನು ಖಾತ್ರಿ ಪಡಿಸಿಕೊಳ್ಳುವುದು.

6. ಆಧಾರ್‌ ಸೇವಾ ಕೇಂದ್ರದ ಅಧಿಕಾರಿಗಳು ನಿಮ್ಮ ಫೋಟೋ ತೆಗೆದುಕೊಳ್ಳುವರು.

7. ಫೋಟೋ ಪರಿಷ್ಕರಣೆ ಸೇವೆಗೆ 25 ರೂ. + ಜಿಎಸ್‌ಟಿ ಪಾವತಿ ಮಾಡಿ.

8. ಪರಿಷ್ಕರಣೆ ಮನವಿ ಸಂಖ್ಯೆ (ಯುಆರ್‌ಎನ್‌) ಜೊತೆಗೆ ನಿಮಗೊಂದು ರಸೀದಿ ಕೊಡಲಾಗುವುದು.

9. ಯುಆರ್‌ಎನ್‌ ಬಳಸಿಕೊಂಡು ಫೋಟೋ ಪರಿಷ್ಕರಣೆಯ ಸ್ಟೇಟಸ್‌ ಅನ್ನು ಆನ್ಲೈನ್‌ನಲ್ಲಿ ಪರಿಶೀಲನೆ ಮಾಡಿಕೊಳ್ಳಿ.

ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..?

ಫೋಟೋ ಪರಿಷ್ಕರಣೆಯಾದ ಬಳಿಕ ನಿಮ್ಮ ಆಧಾರ್‌ ಕಾರ್ಡ್‌ನ ಇ-ಕಾಪಿಯನ್ನು ಆನ್ಲೈನ್‌ನಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಕಾರ್ಡ್‌ದಾರರು ಆಧಾರ್‌ ಪೋರ್ಟಲ್ ಮೂಲಕ ಪಿವಿಸಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...