alex Certify ಮೊಬೈಲ್, ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ಕೊರೋನಾ ಲಸಿಕೆ ನೀಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್, ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್: ಉಚಿತವಾಗಿ ಕೊರೋನಾ ಲಸಿಕೆ ನೀಡಿಕೆ

ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್ 8 ರಿಂದ 41 ಸರ್ಕಾರಿ ಹಾಗೂ 8 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು  ನೀಡಲಾಗುತ್ತಿದೆ.

60 ವರ್ಷ ಮೇಲ್ಪಟ್ಟ ಹಾಗೂ 45-59 ವರ್ಷದ ಆರೋಗ್ಯ ತೊಂದರೆ ಇರುವ ಫಲಾನುಭವಿಗಳು ತಮ್ಮ ಹತ್ತಿರದ  ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದು. 45-59 ವರ್ಷದವರು ತಮಗೆ ಇರುವ ಕಾಯಿಲೆ ಬಗ್ಗೆ ವೈದ್ಯರಿಂದ ಧೃಡೀಕರಣ ಪತ್ರವನ್ನು ಕಡ್ಡಾಯವಾಗಿ ತರುವುದು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸಹ ಈ ಕೋವಿಡ್ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು.  ಎಲ್ಲಾ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ಗುರುತಿನ ಚೀಟಿ ಮತ್ತು ಮೊಬೈಲ್ ತರಬೇಕು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ಡೋಸ್ ಗೆ 250 ರೂ. ಪಾವತಿಸಿ ಲಸಿಕೆ ಪಡೆಯಬಹುದಾಗಿದೆ. ಶಿವಮೊಗ್ಗ ಜಿಲ್ಲೆಯ 49 ಕೋವಿಡ್ ಲಸಿಕಾ ಕೇಂದ್ರಗಳು online ನಲ್ಲಿ ಪ್ರಚಾರಪಡಿಸಿದ cowin app ಅಥವಾ ಆರೋಗ್ಯಸೇತು app ಮೂಲಕ  ದಾಖಲಿಸಿಕೊಂಡು ಅಥವಾ ನಿಮ್ಮ ಹತ್ತಿರದ ಆಸ್ಪತ್ರೆಗೆ ತೆರಳಿ ಆನ್ ಸ್ಪಾಟ್ ದಾಖಲಾತಿ ಮಾಡಿಕೊಂಡು ಲಸಿಕೆ ಪಡೆಯಬಹುದು.

ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿ ಮಹಿಳಾ ಫಲಾನುಭವಿಗಳಿಗೆ ಲಸಿಕೆ ನೀಡಲು ಗುಲಾಬಿ ಬೂತ್(Pink booth) ತೆರೆಯಲಾಗಿದೆ. ಕೋವಿಡ್ ಲಸಿಕೆಯು ತುಂಬಾ ಸುರಕ್ಷಿತವಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಲಸಿಕೆ ಪಡೆಯುವಂತೆ  ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...