ಡಿಜಿಟಲ್ ವ್ಯವಹಾರಗಳ ಇಂದಿನ ಯುಗದಲ್ಲಿ ಬಳಕೆದಾರರ ಪಾನ್ ಹಾಗೂ ಆಧಾರ್ ಮಾಹಿತಿಗಳನ್ನು ಅಕ್ರಮವಾಗಿ ಅಕ್ಸೆಸ್ ಮಾಡಲು ವಂಚಕರು ನೋಡುತ್ತಿರುತ್ತಾರೆ. ಹೀಗೆ ಸಿಕ್ಕ ಮಾಹಿತಿಗಳನ್ನು, ಕಾರ್ಡ್‌ದಾರರ ಅನುಮತಿ ಇಲ್ಲದೇ ಅಕ್ರಮವಾಗಿ ಬಳಸಿ ಆರ್ಥಿಕ ವಂಚನೆಯೆಸಗಲು ಸಹ ನೋಡುತ್ತಿರುತ್ತಾರೆ.
ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ
ಇಂಥ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಳಕಂಡ ಕ್ರಮಗಳ ಬಗ್ಗೆ ಅರಿವಿರುವುದು ಅವಶ್ಯಕವಾಗಿದೆ:
* ನಿಮ್ಮ ಪಾನ್ ಹಾಗೂ ಆಧಾರ್ ಸಂಖ್ಯೆಗಳನ್ನು ಯಾವತ್ತೂ ಬಹಿರಂಗಪಡಿಸಬೇಡಿ.
* ನಿಮ್ಮ ಪಾನ್ ಅಥವಾ ಆಧಾರ್ ಪ್ರತಿಗಳನ್ನು ಯಾರ ಬಳಿಯೂ ಮರೆತು ಇಡಬೇಡಿ.
* ಅಪರಿಚಿತ ವ್ಯಕ್ತಿಗೆ ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್‌ಅನ್ನು ಯಾವತ್ತೂ ಕೊಡಬೇಡಿ.
* ಆಧಾರ್ ಅಥವಾ ಪಾನ್ ಸಂಬಂಧ ನಿಮ್ಮ ಮೊಬೈಲ್‌ಗೆ ಬರುವ ಯಾವುದೇ ಓಟಿಪಿಯನ್ನು ಯಾರೊಂದಿಗೂ ಶೇರ್ ಮಾಡಬೇಡಿ.