alex Certify ಲಾಡ್ಜ್ ನಲ್ಲಿ ಪ್ರೇಯಸಿ ಮುಂದೆಯೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಡ್ಜ್ ನಲ್ಲಿ ಪ್ರೇಯಸಿ ಮುಂದೆಯೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ..!

ಯುವಕನೊಬ್ಬ ತನ್ನ ಗೆಳತಿಯ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟಾನ್ ತಹಸಿಲ್ನ ವಿಹೆ ಘಾಟ್ ಬಳಿಯ ಲಾಡ್ಜ್ ನಲ್ಲಿ ನಡೆದಿದೆ.

ಗೆಳತಿಯ ಕಿರುಚಾಟವನ್ನು ಕೇಳಿದ ನಂತರ ಲಾಡ್ಜ್ ಸಿಬ್ಬಂದಿ ಕೋಣೆಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಮೃತ ತನ್ಮಯ್ ದೇಸಾಯಿ ಮತ್ತು ಅವನ ಗೆಳತಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೆಂಚುರಿ ಲಾಡ್ಜ್ ಗೆ ಚೆಕ್ ಇನ್ ಮಾಡಿದ್ದರು. ಅವರ ಆಧಾರ್ ಕಾರ್ಡ್ ನೀಡಿದ ನಂತರ ಅವರಿಗೆ ರಿಸೆಪ್ಷನ್ ನಲ್ಲಿ ಕೊಠಡಿಯನ್ನು ನಿಗದಿಪಡಿಸಲಾಯಿತು. ಲಾಡ್ಜ್ ನಲ್ಲಿ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು ತನ್ಮಯ್ ತನ್ನ ಗೆಳತಿಯ ದುಪಟ್ಟಾಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅವನು ನೇಣು ಬಿಗಿದುಕೊಳ್ಳುತ್ತಿದ್ದಂತೆ ಪ್ರೇಯಸಿ ಕಿರುಚಲು ಪ್ರಾರಂಭಿಸಿದಳು, ಚೀರಾಟ ಕೇಳಿ ಲಾಡ್ಜ್ ಸಿಬ್ಬಂದಿ ಓಡಿ ಬಂದರೂ ಕೂಡ ದುರದೃಷ್ಟವಶಾತ್ ತಡವಾಗಿತ್ತು. ಲಾಡ್ಜ್ ಮ್ಯಾನೇಜರ್ ಮಹೇಶ್ ಧುಮಾಲ್ ತಕ್ಷಣ ಈ ಘಟನೆಯನ್ನು ಮಲ್ಹಾರ್ಪೇತ್ ಪೊಲೀಸರಿಗೆ ವರದಿ ಮಾಡಿದ್ದಾರೆ. ಪೊಲೀಸರು ನಡೆಸಿದ ತನಿಖೆಯ ನಂತರ, ತನ್ಮಯ್ ಅವರ ದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...