ನಾವು ಕೆಲಸ ಮಾಡುವ ಕಚೇರಿಯಲ್ಲಿ ರಜಾ ಕೇಳೋದು ಅಂದ್ರೆ ಎಲ್ಲರಿಗೂ ಕಠಿಣವಾದ ಕೆಲಸ. ರಜೆ ಕೇಳುವ ಸಂದರ್ಭದಲ್ಲಿ ಮೇಲಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸೋದೇ ಒಂದು ಕಷ್ಟ. ಈ ಎಲ್ಲದರ ನಡುವೆ ಅಮೆರಿಕ ಮೂಲದ ಸಾಫ್ಟ್ ವೇರ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ 9 ದಿನಗಳ ಕಾಲ ಸಂಬಳದ ಜೊತೆಯಲ್ಲಿ ರಜೆ ನೀಡಿದೆ.
ಲಿಂಕ್ಡಿನ್ ಬಳಕೆದಾರರಾಗಿರುವ ಶೈಲೇಂದ್ರ ಪಾಂಡೆ ಎಂಬವರು ಈ ಸಂಬಂಧ ಪೋಸ್ಟ್ ಶೇರ್ ಮಾಡಿದ್ದಾರೆ ಜುಲೈ ಮೊದಲ ವಾರದಲ್ಲಿ ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಸಂಬಳ ಸಮೇತ ರಜೆ ನೀಡುವ ಬಗ್ಗೆ ಮಾಡಿರುವ ಇಮೇಲ್ನ ಸ್ಕ್ರೀನ್ಶಾಟ್ ಶೇರ್ ಮಾಡಿದ್ದಾರೆ.
ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಅನೇಕ ಕಂಪನಿಗಳು ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತವೆ. ಒತ್ತಡವಿಲ್ಲದ ಕೆಲಸದ ನಡುವೆ ನಾವು ವಿಶ್ರಾಂತಿ ತೆಗೆದುಕೊಳ್ಳೋದನ್ನೇ ಮರೆತುಬಿಡ್ತೇವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಅಮೆರಿಕ ಮೂಲದ ಸಾಫ್ಟ್ವೇರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ಮತ್ತು ರೀಚಾರ್ಜ್ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಸಂಬಳದ ಜೊತೆಯಲ್ಲಿ ರಜೆ ನೀಡಿದೆ. ಜುಲೈ 1ರಿಂದ 9ರವರೆಗೆ ನಮ್ಮ ತಂಡವು ವಿಶ್ರಾಂತಿ ಹಾಗೂ ರೀಚಾರ್ಜ್ ಮಾಡಿಕೊಳ್ಳಲು ವಿರಾಮ ತೆಗೆದುಕೊಳ್ಳಲಿದೆ ಎಂದು ಹ್ಯಾಕರ್ರ್ಯಾಂಕ್ ಮೇಲ್ನಲ್ಲಿ ತಿಳಿಸಿದೆ.