ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರು ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ವಿ ಶಿವಕುಮಾರ್ ನಿರ್ದೇಶನದ ‘ನಾ ನಿನಗೆ ನೀ ಎನಗೆ’ ಎಂಬ ಸುಂದರ ಪ್ರೇಮ ಕಥೆಯುಳ್ಳ ಕಿರುಚಿತ್ರ ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಶಾರ್ಟ್ ಫಿಲಂನಲ್ಲಿ ಶಿವಕುಮಾರ್ ಮತ್ತು ”ನೀನಾದೆನಾ” ಧಾರಾವಾಹಿಯ ಖುಷಿ ಶಿವು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತ್ಯಾಗರಾಜು ಸಂಗೀತ ಸಂಯೋಜನೆ ನೀಡಿದ್ದು, ರಮೇಶ್ ತಿಮ್ಮಯ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಶಿಕುಮಾರ್ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಭರತ್ ವೆಂಕಟಸ್ವಾಮಿ ಸಾಹಿತ್ಯವಿದೆ.