ದುಬೈ: ಐಸ್ ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿಂತೀವಿ. ಜಾತ್ರೆಯಲ್ಲೋ ಅಥವಾ ಪ್ರಸಿದ್ಧ ಐಸ್ ಕ್ರೀಂ ಪಾರ್ಲರ್ ಗಳಲ್ಲೋ ಇದು ತಿನ್ನುವ ಮಜಾನೇ ಬೇರೆ. ಭಿನ್ನ-ವಿಭಿನ್ನವಾದ ಐಸ್ ಕ್ರೀಂ ಗಳು ಮಾರುಕಟ್ಟೆಗೆ ಲಗ್ಗೆಇಟ್ಟಿವೆ. ಸಾಮಾನ್ಯವಾಗಿ ಐಸ್ ಕ್ರೀಂ ಬೆಲೆ ಎಷ್ಟಿರಬಹುದು, 500 ರೂ, 1000 ರೂ..? ಇಲ್ಲ ಇಲ್ಲೊಂದೆಡೆ ಒಂದು ಸ್ಕೂಪ್ ಐಸ್ ಕ್ರೀಂ ಬೆಲೆ ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ..!
ದುಬೈನ ಐಸ್ ಕ್ರೀಂ ಪಾರ್ಲರ್ ಒಂದರಲ್ಲಿ ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಂ ಬೆಲೆ ಬರೋಬ್ಬರಿ 3000 ದಿರ್ಹಾಮ್ ಅಂದರೆ 60,000 ರೂ.ಗಳು. ಅಂಥಾ ವಿಶೇಷತೆ ಏನಿದೆ ಗೊತ್ತಾ ಈ ಐಸ್ ಕ್ರೀಂ ನಲ್ಲಿ ? 23 ಕ್ಯಾರೆಟ್ ಚಿನ್ನ ಇದೆ. ಶಾಕ್ ಆಗ್ಬೇಡಿ, ಬ್ಲ್ಯಾಕ್ ಡೈಮಂಡ್ ಐಸ್ ಕ್ರೀಂ ಎಂಬ ಹೆಸರಿಡಲಾಗಿದ್ದು, ಇದಕ್ಕೆ ವೆನಿಲ್ಲಾ ಫ್ಲೇವರ್ ಜತೆ 23 ಕ್ಯಾರೆಟ್ ಚಿನ್ನ ಹಾಗೂ ತಾಜಾ ಕೇಸರಿಯನ್ನು ಹಾಕಲಾಗುತ್ತೆ.
ಹೈಕಮಾಂಡ್ ನಿಂದ ಒಳ್ಳೆ ನಿರ್ಧಾರ; ಕಾಲಚಕ್ರ ತಿರುಗುತ್ತಿರುತ್ತೆ ಎಂದ ಸೋಮಶೇಖರ ರೆಡ್ಡಿ
ಹೌದು, ಈ ಚಿನ್ನದ ಐಸ್ ಕ್ರೀಂ ಸವಿಯಬೇಕೆಂದರೆ ನೀವು ದುಬೈಗೆ ಪ್ರಯಾಣಿಸಬೇಕು. ವಿಶ್ವದ ಅತಿ ದುಬಾರಿ ಐಸ್ ಕ್ರೀಂ ಇದಾಗಿದೆ. ಇನ್ನು ಈ ವಿಡಿಯೋ ಪೋಸ್ಟ್ ಮಾಡಿರುವ ಶೆನಾಜ್ ಎಂಬುವವರು ‘’ದುಬೈನಲ್ಲಿ ಮಾತ್ರ ಚಿನ್ನದ ಐಸ್ ಕ್ರೀಂ ತಿನ್ನಲು ಸಾಧ್ಯ. ಇದು ಆಸಕ್ತಿದಾಯಕವಾಗಿತ್ತು. ಅಲ್ಲದೆ ನನಗಿದನ್ನು ಉಚಿತವಾಗಿ ನೀಡಿದ್ದಾರೆ’’ ಅಂತಾ ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
https://www.instagram.com/p/CRiHICQjxwF/?utm_source=ig_web_copy_link
https://www.instagram.com/p/B9BPLGJpNGM/?utm_source=ig_web_copy_link
https://www.instagram.com/p/B0GEnZmpCV9/?utm_source=ig_web_copy_link