alex Certify ಅಲಿಯಾ ಭಟ್ ತಾನು ಗರ್ಭಿಣಿ ಎಂದು ಹೇಳುತ್ತಲೇ ಈ ರೆಡ್ಡಿಟ್‌ ಬಳಕೆದಾರಳಿಗೆ ಮರಳಿ ಸಿಕ್ಕಿದೆ ನಿಷೇಧಗೊಂಡಿದ್ದ ಖಾತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲಿಯಾ ಭಟ್ ತಾನು ಗರ್ಭಿಣಿ ಎಂದು ಹೇಳುತ್ತಲೇ ಈ ರೆಡ್ಡಿಟ್‌ ಬಳಕೆದಾರಳಿಗೆ ಮರಳಿ ಸಿಕ್ಕಿದೆ ನಿಷೇಧಗೊಂಡಿದ್ದ ಖಾತೆ….!

ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಮದುವೆಯಾದ ಕೆಲವೇ ದಿನಗಳಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಸುದ್ದಿಯನ್ನು ಪೋಸ್ಟ್ ಮಾಡಿದ್ದ ಆರೋಪದಲ್ಲಿ ರೆಡ್ಡಿಟ್‌ ಬಳಕೆದಾರಳಿಗೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲಾಗಿದೆ.

ಅಲಿಯಾ ಭಟ್ ಗರ್ಭಿಣಿಯಾಗಿದ್ದಾರೆ ಎಂದು ಈಕೆ ರೆಡ್ಡಿಟ್‌ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಈ ಪೋಸ್ಟ್ ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬಳಕೆದಾರರು ಇದೊಂದು ಸುಳ್ಳು ಸುದ್ದಿ, ಇಂತಹ ಸುದ್ದಿಗಳನ್ನು ಪೋಸ್ಟ್ ಮಾಡಿ ಖ್ಯಾತನಾಮರ ಹೆಸರಿಗೆ ಕಳಂಕ ತರಬಾರದು ಎಂದು ಒತ್ತಾಯಿಸಿದ್ದರು.

ಈ ಟೀಕೆಗಳನ್ನು ಗಮನಿಸಿದ ರೆಡ್ಡಿಟ್‌ ಈ ಬಳಕೆದಾರಳು ಮಾಡಿರುವ ಪೋಸ್ಟ್ ಸುಳ್ಳು ಸುದ್ದಿ ಎಂದು ಹೇಳಿ ಕೂಡಲೇ ಬಳಕೆದಾರಳಿಗೆ ಸುದ್ದಿಗಳನ್ನು ಪೋಸ್ಟ್ ಮಾಡದಂತೆ ನಿಷೇಧ ಹೇರಿತ್ತು.

ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಬಿಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ

ಆದರೀಗ ಇನ್ ಸ್ಟಾಗ್ರಾಂನಲ್ಲಿ ಅಲಿಯಾ ಭಟ್ ಮತ್ತು ಅವರ ಪತಿ ರಣಬೀರ್ ಕಪೂರ್ ಇಬ್ಬರೂ ತಾವು ತಾಯಿ – ತಂದೆ ಆಗುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಆಶ್ಚರ್ಯ ಉಂಟು ಮಾಡಿದ್ದಾರೆ.

ಅಯ್ಯೋ ಈ ವಿಚಾರವನ್ನು ಎರಡು ತಿಂಗಳ ಹಿಂದೆಯೇ BollyBlindsNGossip ನಲ್ಲಿ ಪೋಸ್ಟ್ ಮಾಡಲಾಗಿತ್ತಲ್ಲಾ ಎಂದು ರೆಡ್ಡಿಟ್‌ ಬಳಕೆದಾರರು ಹುಬ್ಬೇರಿಸಿದ್ದಾರೆ. ಇದೀಗ ನಿಷೇಧವನ್ನು ತೆರವುಗೊಳಿಸಲಾಗಿದ್ದು, ರೆಡ್ಡಿಟ್‌ ಬಳಕೆದಾರಳಿಗೆ ಪ್ರಶಸ್ತಿಯನ್ನು ನೀಡಬೇಕೆಂದು ಕಿಚ್ಚಾಯಿಸಿದ್ದಾರೆ !

ಈ ಬಳಕೆದಾರಳು ಏಪ್ರಿಲ್ ತಿಂಗಳಲ್ಲೇ ಅಲಿಯಾ ಭಟ್ ಗರ್ಭಿಣಿಯಾಗಿದ್ದಾರೆ. ಅವರ ಆಪ್ತವಲಯ ಈ ವಿಚಾರವನ್ನು ಖಚಿತಪಡಿಸಿದೆ ಎಂದು ಹೇಳಿದ್ದರು.

ಇದೀಗ ಸ್ವತಃ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರೇ ಈ ವಿಚಾರವನ್ನು ಹಂಚಿಕೊಂಡಿರುವುದರಿಂದ ರೆಡ್ಡಿಟ್‌ ತನ್ನ ಬಳಕೆದಾರಳಿಗೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಇದಕ್ಕೆ ಧನ್ಯವಾದಗಳನ್ನು ಅರ್ಪಿಸಿರುವ ಬಳಕೆದಾರಳು, ನನ್ನ ಸುದ್ದಿಯ ಮೂಲ ಸತ್ಯದಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಅಂದಹಾಗೆ, ಈ ಬಳಕೆದಾರಳಿಗೆ ಮತ್ತಷ್ಟು ಕಿಚಾಯಿಸಲು ಆರಂಭಿಸಿರುವ ಉಳಿದ ಬಳಕೆದಾರರು, ಈಗ ಹೇಳಿ, ಅಲಿಯಾ ಭಟ್ ಹೆಣ್ಣು ಮಗು ಅಥವಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆಯೇ ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...