ಹಡಗುಗಳಿಗೆ ಸ್ಮಶಾನವಿದೆ ಎಂದು ತಿಳಿದಿದೆಯೇ?
ಇತ್ತೀಚೆಗೆ, ಹಡಗುಗಳ ಸ್ಮಶಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಐದು ದೊಡ್ಡ ಹಡಗುಗಳು ಸಮುದ್ರ ತೀರದಲ್ಲಿ ನಿಂತಿರುವುದು ಕಾಣಬಹುದು.
ಈ ಹಡಗುಗಳು ಸ್ಪಷ್ಟವಾಗಿ ಶಿಥಿಲಾವಸ್ಥೆಯಲ್ಲಿರುವಂತೆ ಕಾಣಿಸುತ್ತದೆ. ಅವುಗಳ ನಡುವೆ ಎರಡು ಬಿಳಿ ಕ್ರೂಸ್ಗಳು ಉತ್ತಮ ಆಕಾರದಲ್ಲಿ ಕಾಣುತ್ತಿದ್ದರೂ, ಅವುಗಳನ್ನು ಸಹ ಅಲ್ಲಿ ನಿಲ್ಲಿಸಲಾಗಿದೆ.
ಚಿತ್ರವು ಟರ್ಕಿಯ ಅಲಿಯಾಗಾದಲ್ಲಿ ವಿಶ್ವದ ಪ್ರಸಿದ್ಧ ಹಡಗು ಡಂಪ್ ಯಾರ್ಡ್ನದ್ದಾಗಿದೆ.
ವಾಸ್ತವವಾಗಿ, ಹಡಗುಗಳನ್ನು 10ರಿಂದ 15 ವರ್ಷಗಳ ಬಳಕೆಯ ನಂತರ ಡಂಪ್ ಯಾರ್ಡ್ಗೆ ತಳ್ಳಲಾಗುತ್ತದೆ. ನಂತರ ಅವುಗಳನ್ನು ಡಿಸ್ ಮ್ಯಾಂಟಲ್ ಮಾಡಲು 2500 ಕ್ಕೂ ಹೆಚ್ಚು ಕೆಲಸಗಾರರು ಒಟ್ಟಾಗಿ ಸೇರುತ್ತಾರೆ.
ಯಂತ್ರಗಳು, ಎಂಜಿನ್ಗಳು ಮತ್ತು ಉಕ್ಕು ಮತ್ತು ಅಲ್ಯೂಮಿನಿಯಂನಂತಹ ಕೆಲವು ಲೋಹಗಳು ಸೇರಿದಂತೆ ವಿವಿಧ ಅಂಶಗಳಿಂದ ಹಡಗುಗಳನ್ನು ತಯಾರಿಸಲಾಗಿರುತ್ತದೆ. ಹೀಗಾಗಿ ಇಲ್ಲಿನ ಅನೇಕ ವಸ್ತುಗಳನ್ನು ಇತರ ಹಡಗುಗಳನ್ನು ನಿರ್ಮಿಸಲು ಮರುಬಳಕೆ ಮಾಡಬಹುದು.
ಹಡಗು ಒಡೆಯುವವರಿಗೆ ನಿಜವಾದ ಸವಾಲು ಕ್ರೂಸ್ನದ್ದಾಗಿರುತ್ತದೆ. ಕ್ರೂಸ್ಗಳು ನೂರಾರು ಕೊಠಡಿಗಳು, ಸ್ಪಾಗಳು, ಪಬ್ಗಳು, ಡೈನಿಂಗ್ ಹಾಲ್ಗಳು ಮತ್ತು ದೃಶ್ಯವಿಕ್ಷಣೆಯ ಸ್ಥಳಗಳಂತಹ ವಿವಿಧ ಸೌಲಭ್ಯ ಇರುತ್ತವೆ. ಜೊತೆಗೆ ಅನೇಕ ಇತರ ಸೌಕರ್ಯಗಳನ್ನು ನೀಡುತ್ತವೆ. ಅಂತಹ ಕೊಠಡಿಗಳು ಮತ್ತು ಸ್ಥಳಗಳನ್ನು ಒಡೆಯುವುದು ಈ ಕಾರ್ಮಿಕರಿಗೆ ಸವಾಲಾಗಿರುತ್ತದೆ. ಸರಕು ಸಾಗಣೆ ಹಡಗಿಗೆ ಹೋಲಿಸಿದರೆ ಕ್ರೂಸ್ ಕಿತ್ತುಹಾಕಲು ಎರಡು ಪಟ್ಟು ಸಮಯವನ್ನು ತೆಗೆದುಕೊಳ್ಳಬಹುದು.