ಸಿಹಿ ತಿಂಡಿ ಅನೇಕರಿಗೆ ಇಷ್ಟ. ಊಟದ ನಂತ್ರ, ಟೀ ಕುಡಿಯುವ ವೇಳೆ ಸಿಹಿ ತಿನ್ನಲು ಅನೇಕರು ಇಷ್ಟಪಡ್ತಾರೆ. ಹಾಲಿನ ಪೌಂಡರ್ ನಿಂದ ಬರ್ಫಿ ತಯಾರಿಸಿ ಎಂಜಾಯ್ ಮಾಡಿ.
ಹಾಲಿನ ಪುಡಿ ಬರ್ಫಿ ಮಾಡಲು ಬೇಕಾಗುವ ಪದಾರ್ಥ :
ಹಾಲು – 2 ಕಪ್
ಹಾಲಿನ ಪುಡಿ – 4 ಕಪ್
ಸಕ್ಕರೆ ಪುಡಿ – 1 ಕಪ್
ಏಲಕ್ಕಿ ಪುಡಿ – 1 ಚಮಚ
ತುಪ್ಪ – 1 ಚಮಚ
ಒಣ ಹಣ್ಣುಗಳು – 1 ಬೌಲ್
ಹಾಲಿನ ಪುಡಿ ಬರ್ಫಿ ಮಾಡುವ ವಿಧಾನ :
ಬಾಣಲೆಗೆ ತುಪ್ಪವನ್ನು ಹಾಕಿ ಅದಕ್ಕೆ ಹಾಲನ್ನು ಹಾಕಿ ಬಿಸಿ ಮಾಡಿ. ಹಾಲು ಬಿಸಿಯಾಗ್ತಿದ್ದಂತೆ ಹಾಲಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ. ಇದಕ್ಕೆ ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಸೇರಿಸಿ. ಇನ್ನೊಂದು ಪಾತ್ರೆಗೆ ತುಪ್ಪವನ್ನು ಹಾಕಿ ಸವರಿ. ಮಿಶ್ರಣವನ್ನು ಹಾಕಿ 20 ನಿಮಿಷ ಬಿಡಿ. ನಂತ್ರ ಬರ್ಫಿ ಆಕಾರಕ್ಕೆ ಕತ್ತರಿಸಿ.