ಫ್ಲೋರಿಡಾದ ನ್ಯೂ ಸ್ಮಿರ್ನಾ ಬೀಚ್‌ನ ರೆಸ್ಟೋರೆಂಟ್ ಪಾರ್ಕಿಂಗ್‌ನಲ್ಲಿದ್ದ ಕಾರಿನೊಳಗೆ ಬಿಸಿಲಿನ ಬೇಗೆಗೆ ಬೆಂದು ನಾಲ್ಕು ನಾಯಿಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಇಪ್ಪತ್ತೈದು ವರ್ಷದ ಯುವತಿ ರೆಸ್ಟೋರೆಂಟ್‌ಗೆ ಗುರುವಾರ ಮಧ್ಯಾಹ್ನ ಊಟಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಆರೋಪಿ ಯುವತಿಯನ್ನು ಮಿಸೌರಿಯ ಟೆಸಿಯಾ ವೈಟ್ ಎಂದು ಗುರುತಿಸಲಾಗಿದೆ.
ಪ್ರಾಣಿ ಹಿಂಸೆ ಮತ್ತು ಹತ್ಯೆ ಆರೋಪದ ಮೇರೆಗೆ ಈಕೆಯನ್ನು ಬಂಧಿಸಲಾಗಿದೆ ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ.
ಪ್ರಾದೇಶಿಕ ಪಕ್ಷಗಳ ಪೈಕಿ ಈ ಪಾರ್ಟಿಗೆ ಹರಿದುಬಂದಿದೆ ಅತಿ ಹೆಚ್ಚು ಆದಾಯ
ನಾಲ್ಕು ನಾಯಿಗಳ ಪೈಕಿ 12 ವಾರ ಪ್ರಾಯದ ಗೋಲ್‌ಡೆಂಡೂಡಲ್ಸ್ ಎರಡು, 2 ವರ್ಷದ ಬಾಕ್ಸರ್, 4 ವರ್ಷದ ಗೋಲ್ ಡೆಂಡೂಡಲ್ ಇದ್ದವು. ಈ ನಾಯಿಗಳು ಸುರಕ್ಷಿತವಾಗಿ ಇರಲೆಂದು ಎಸಿ ಚಾಲೂ ಇಟ್ಟು ಬಂದಿದ್ದೆ. ಊಟ ಮುಗಿಸಿ ಬರುವಷ್ಟರಲ್ಲಿ ಎಲ್ಲವೂ ಮೃತಪಟ್ಟಿರುವುದು ಕಂಡುಬಂತು ಎಂದು ಟೆಸಿಯಾ ಹೇಳಿಕೆ ನೀಡಿದ್ದಾಳೆ. ಆದರೆ, ಆ ದಿನ ತಾಪಮಾನ ಹೆಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತದಿಂದ ನೊಂದ ಯುವತಿ ಗೋಳಾಡುತ್ತ, “ನನಗೆ ನಾಯಿ ಸಾಕಲು ಅವಕಾಶ ನೀಡಬಾರದು. ಅನ್ಯಾಯವಾಗಿ ಹೋಯಿತುʼʼ ಎಂದು ಹೇಳುತ್ತಿದ್ದುದು ಕಂಡು ಬಂತು. ಪೊಲೀಸರು ಆಕೆಯನ್ನು ಸ್ಥಳೀಯ ಜೈಲಿಗೆ ಸಾಗಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.