ಈ ಹಿಂದೆ ದಾಖಲೆ ಬೆಲೆಯ ಏರಿಕೆ ಕಂಡಿದ್ದ ಟೊಮೆಟೊ ದರ ಈಗ ಕುಸಿತದ ಹಾದಿ ಹಿಡಿದಿದ್ದು, ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರದಂದು ನಡೆದ ಹರಾಜಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಟೊಮೆಟೊ ಖರೀದಿಯಾಗಿದ್ದು, 15 ಕೆಜಿ ‘ನಾಟಿ’ ಟೊಮೆಟೊ ಬಾಕ್ಸಿಗೆ ಕನಿಷ್ಠ 45 ರೂಪಾಯಿ ಹಾಗೂ ಗರಿಷ್ಠ 120 ರೂಪಾಯಿ ದೊರೆತಿದೆ.
ಕಡಿಮೆ ಗುಣಮಟ್ಟದ ಕೆಜಿ ಟೊಮಟೊಗೆ ಸರಾಸರಿ ಕನಿಷ್ಠ 3 ರೂಪಾಯಿಗಳಾಗಿದ್ದರೆ, ಉತ್ತಮ ಗುಣಮಟ್ಟದ ಕೆಜಿ ಟೊಮೆಟೊಗೆ ಗರಿಷ್ಠ 8 ರೂಪಾಯಿ ದೊರೆತಿದೆ. 15 ಕೆಜಿ ‘ಸೀಡ್’ ಟೊಮೊಟೊ ಬಾಕ್ಸ್ ದರ ಕೇವಲ 80 ರೂಪಾಯಿಗಳಿಗೆ ಕುಸಿದಿದೆ.