ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿಯೊಂದು ದೇಹಕ್ಕೂ ಅನೇಕ ವಿಧದ ವಿಟಮಿನ್ ಮತ್ತು ಪೋಷಕಾಂಶಗಳ ಅವಶ್ಯಕತೆಯಿರುತ್ತದೆ. ಅದರಲ್ಲಿ ವಿಟಮಿನ್ ಸಿ ಕೂಡ ಒಂದು.
ವಿಟಮಿನ್ ಸಿ ಹೊರತಾಗಿ, ನಿಂಬೆಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್ ಮುಂತಾದ ಪೋಷಕಾಂಶಗಳಿವೆ. ಇಷ್ಟೆಲ್ಲ ಇದ್ರೂ ಕೆಲವರಿಗೆ ನಿಂಬೆ ಹಣ್ಣು ಹಾನಿಕರ.
ಆಮ್ಲೀಯತೆ ಅಸಿಡಿಟಿ ಸಮಸ್ಯೆ ಇರುವವರು ನಿಂಬೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ನಿಂಬೆ ಹಣ್ಣಿನ ನೀರನ್ನು ಸೇವಿಸಲೇಬೇಕು ಎನ್ನುವವರು ಉಗುರುಬೆಚ್ಚಗಿನ ನೀರಿಗೆ ನಿಂಬೆ ಹಣ್ಣನ್ನು ಹಿಚುಕಿ, ಜೇನುತುಪ್ಪ ಬೆರೆಸಿ ಸೇವನೆ ಮಾಡಬೇಕು.
ಬಾಯಿ ಹುಣ್ಣಿನ ಸಮಸ್ಯೆ ಇರುವವರು ನಿಂಬೆ ಹಣ್ಣನ್ನು ಸೇವಿಸಬಾರದು. ಹುಣ್ಣಾದಾಗ ನಿಂಬೆ ಹಣ್ಣು ಸೇವನೆ ಮಾಡಿದ್ರೆ ಸಮಸ್ಯೆ, ಉರಿ ಜಾಸ್ತಿಯಾಗುತ್ತದೆ.
ಕಿಡ್ನಿಗೆ ಸಂಬಂಧಿತ ಸಮಸ್ಯೆ ಇದ್ದವರು ಕೂಡ ನಿಂಬೆ ಹಣ್ಣಿನಿಂದ ದೂರವಿರುವುದು ಒಳ್ಳೆಯದು.
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕೂಡ ನಿಂಬೆ ಹಣ್ಣು ಸೇವನೆ ಮಾಡಬಾರದು.