alex Certify ನಟ ದರ್ಶನ್ ಹುಟ್ಟು ಹಬ್ಬಕ್ಕೆ ಶುಭ ಕೋರಲು 460 ಕಿ.ಮೀ ಪಾದಯಾತ್ರೆ ಹೊರಟ ‘ಡಿ ಬಾಸ್’ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ದರ್ಶನ್ ಹುಟ್ಟು ಹಬ್ಬಕ್ಕೆ ಶುಭ ಕೋರಲು 460 ಕಿ.ಮೀ ಪಾದಯಾತ್ರೆ ಹೊರಟ ‘ಡಿ ಬಾಸ್’ ಅಭಿಮಾನಿ

ಬೆಂಗಳೂರು : ಫೆ.16 ರಂದು ನಟ ದರ್ಶನ್ ಅವರ ಹುಟ್ಟು ಹಬ್ಬವಿದ್ದು, ಈಗಿನಿಂದಲೇ ಡಿ ಬಾಸ್ ಅಭಿಮಾನಿಗಳು ಸಕಲ ಸಿದ್ದತೆ ಆರಂಭಿಸಿದ್ದಾರೆ. ಇಲ್ಲೋರ್ವ ಅಭಿಮಾನಿ ನಟ ದರ್ಶನ್ ಗೆ ಶುಭ ಕೋರಲು 460 ಕಿ.ಮೀ ಪಾದಯಾತ್ರೆ ಹೊರಟು ಗಮನ ಸೆಳೆದಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರಗುಂಟಾದಿಂದ ಬೆಂಗಳೂರಿಗೆ ನಟ ದರ್ಶನ್ ಅಭಿಮಾನಿ ವೀರಭದ್ರ ಪಾದ ಯಾತ್ರೆ ಮಾಡ್ತಿದ್ದಾರೆ . ಈ ಹಿಂದೆ ಕಾಟೇರ ಸಿನಿಮಾ ಸಕ್ಸಸ್ ಆಗಲಿ, ದರ್ಶನ್ ಗೆ ಯಶಸ್ಸು ಸಿಗಲಿ ಎಂದು ಗುರಗುಂಟಾ ಅಮರೇಶ್ವರ ದೇವರಿಗೆ ಹರಕ್ಕೆ ಹೊತ್ತಿದ್ದರು. ಇದೀಗ ಹರಕೆ ತೀರಿಸಿ ನಟ ದರ್ಶನ್ ಗೆ ಶುಭ ಕೋರಲು 460 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ.

ಫೆ.16 ರಂದು ದರ್ಶನ್ ನಿವಾಸ ತಲುಪಿ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ವೀರಭದ್ರ ಅಂದುಕೊಂಡಿದ್ದಾರಂತೆ. ಇನ್ನೂ, ಕಾಟೇರ ಸಿನಿಮಾ ಭರ್ಜರಿಯಾಗಿ ಮುನ್ನುಗ್ಗಿ ಉತ್ತಮ ಕಲೆಕ್ಷನ್ ಮಾಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...