alex Certify ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….!

ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ ಭಾಗವಾಗಿ, ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ದಿನಸಿ ಅಪ್ಲಿಕೇಶನ್ ಇನ್‌ಸ್ಟಾಮಾರ್ಟ್‌ನಲ್ಲಿ ಜನರು ಹುಡುಕುತ್ತಿರುವ ಕೆಲವು ವಿಚಿತ್ರವಾದ ವಿಷಯಗಳನ್ನು ಬಹಿರಂಗಪಡಿಸಿದೆ.

ತನ್ನ ವರದಿಯ ಏಳನೇ ಆವೃತ್ತಿ, How India Swiggy’d 2022, ಸ್ವಿಗ್ಗಿ ಗ್ರಾಹಕರು ದಿನಸಿ ವಸ್ತುಗಳ ಅಡಿಯಲ್ಲಿ ಬರದ ವಿಲಕ್ಷಣವಾದ ವಸ್ತುಗಳನ್ನು ಹುಡುಕಿದ್ದಾರೆ ಎಂದು ಬಹಿರಂಗಪಡಿಸಿದೆ.

ಉದಾಹರಣೆಗೆ, ಪೆಟ್ರೋಲ್ ಅನ್ನು ಸ್ವಿಗ್ಗಿ ಇನ್​ಸ್ಟಾಮಾರ್ಟ್​ನಲ್ಲಿ ಸುಮಾರು 5,981 ಬಾರಿ ಹುಡುಕಲಾಗಿದೆ. 8,810 ಜನರು ಒಳ ಉಡುಪುಗಳನ್ನು ಖರೀದಿಸಬಹುದೇ ಎಂದು ಪರಿಶೀಲಿಸಿದ್ದಾರೆ. ಸಾವಿರಾರು ಜನರು ಸ್ವಿಗ್ಗಿ ಒಂದೇ ದಿನದಲ್ಲಿ ತಲುಪಿಸಬಹುದೆಂದು ನಿರೀಕ್ಷಿಸಿದ ಸೋಫಾಗಳು ಮತ್ತು ಬೆಡ್‌ಗಳನ್ನೂ ಸರ್ಚ್​ ಮಾಡಿದ್ದಾರೆ.

ಆದಾಗ್ಯೂ, ವಿಚಿತ್ರವಾದ ಹುಡುಕಾಟ ಪದವೆಂದರೆ “ಮಮ್ಮಿ”. ಈ ಪದವನ್ನು ಒಂದೆರಡು ಬಾರಿ ನೋಡಲಾಗಿಲ್ಲ, ಬದಲಿಗೆ, 2022 ರಲ್ಲಿ 7,275 ಬಳಕೆದಾರರು ಅದನ್ನು ಹುಡುಕಿದ್ದಾರೆ. ಸ್ವಿಗ್ಗಿ ಕೂಡ ಈ ಬಗ್ಗೆ ಬಹಳ ಗೊಂದಲಗೊಂಡಿದ್ದು, ಇದೇನೆಂದು ತಿಳಿಯಬಯಸಿದೆ!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...