
ಮೂರು ಸಾವಿರ ವರ್ಷಗಳಷ್ಟು ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬನ ಅಸ್ಥಿಪಂಜರ ಸಿಕ್ಕಿದ್ದು, ಶಾರ್ಕ್ ದಾಳಿಯಿಂದ ಮೃತಪಟ್ಟ ಘಟನೆಯೊಂದು ದಾಖಲಾದ ಮೊದಲ ನಿದರ್ಶನ ಇದಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಜಪಾನ್‌ನ ಒಕಾಯಾಮಾ ಪ್ರಿಫೆಕ್ಚರ್‌ನ ಸುಕೋಮೋ ಪ್ರಾಚ್ಯವಸ್ತು ಸ್ಮಾರಕದ ಬಳಿ ಇರುವ ಸ್ಮಶಾನದಲ್ಲಿ ಸಿಕ್ಕ ಈ ಅಸ್ಥಿಪಂಜರದ ಮೇಲೆ ಸುಮಾರು 800ರಷ್ಟು ಗಾಯದ ಗುರುತುಗಳಿವೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ
’ಜರ್ನಲ್ ಆಫ್ ಆರ್ಕಿಯಾಲಾಜಿಕಲ್ ಸೈನ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ, ಕ್ರಿ.ಪೂ 1370-1010ರ ನಡುವೆ ಬದುಕಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಅಸ್ಥಿ ಪಂಜರ ಇದಾಗಿದೆ ಎನ್ನಲಾಗಿದ್ದು, ಈತನ ಅಸ್ಥಿಪಂಜರದಲ್ಲಿ ಕಂಡುಬಂದಿರುವ ಗಾಯಗಳು ಶಾರ್ಕ್ ದಾಳಿಯಿಂದ ಆಗಿರುವಂತವೆಂದು ತೋರುತ್ತಿವೆ ಎನ್ನಲಾಗಿದೆ.