ವಾಷಿಂಗ್ಟನ್: ಟ್ರಾವೆಲ್ ಬ್ಲಾಗರ್ ಲ್ಯೂಕಾಸ್ ವಾಲ್ ಅವರು ವಾಷಿಂಗ್ಟನ್ ಡಿಸಿಯ ಎಲ್ಲಾ 97 ಮೆಟ್ರೋ ನಿಲ್ದಾಣಗಳಿಗೆ ಭೇಟಿ ನೀಡಿದ ನಂತರ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಹೆಸರು ಪಡೆದುಕೊಂಡಿದ್ದಾರೆ. ಈ ಸಾಧನೆಯನ್ನು ಪೂರ್ಣಗೊಳಿಸಲು ಅವರು ಒಂಬತ್ತು ಗಂಟೆ ತೆಗೆದುಕೊಂಡರು.
ಲ್ಯೂಕಾಸ್ ಅವರು, ಕಳೆದ ಬುಧವಾರದಂದು 97 ಮೆಟ್ರೋ ನಿಲ್ದಾಣಗಳಿಗೆ ಭೇಟಿ ನೀಡಿ ಅಮೆರಿಕದ ಎರಡನೇ ಅತ್ಯಂತ ಜನನಿಬಿಡ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಿದ್ದಾರೆ ಎಂದು ವರದಿಯಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಲ್ಯೂಕಾಸ್ 9 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಪ್ರಯಾಣ ಮುಗಿಸಿದರೂ, ಹಿಂದಿನ ದಾಖಲೆ ಹೊಂದಿರುವ ಸ್ಕಾಟ್ ಬೆನೆಟ್‌ಗಿಂತ ಸುಮಾರು ಒಂದು ಗಂಟೆ ಹೆಚ್ಚು ಸಮಯ ತೆಗೆದುಕೊಂಡರು.
ಬೆನೆಟ್ ತನ್ನ ಪ್ರಯಾಣವನ್ನು ಡಿಸೆಂಬರ್ 2019 ರಲ್ಲಿ 7 ಗಂಟೆಗಳು ಮತ್ತು 59 ನಿಮಿಷಗಳಲ್ಲಿ ಮುಗಿಸಿದ್ದರು. ಆದರೂ ಇವರ ಹೆಸರು ಗಿನ್ನೆಸ್ ದಾಖಲೆ ಸೇರಲು ಕಾರಣ ಏನೆಂದರೆ, ಇದೇ 15ರಂದು ಆರು ಹೊಸ ನಿಲ್ದಾಣಗಳನ್ನು ಮೆಟ್ರೋ ನೆಟ್‌ವರ್ಕ್ ಸೇರಿಸಿದೆ, ಅದನ್ನೂ ಲ್ಯೂಕಾಸ್ ಭೇಟಿ ನೀಡಿದ್ದರಿಂದ ಅವರ ಹೆಸರಿಗೆ ಈಗ ದಾಖಲೆ ಆಗಿದೆ.