alex Certify ಬರೋಬ್ಬರಿ 75 ವರ್ಷಗಳ ಬಳಿಕ ಪಾಕ್ ​ನಲ್ಲಿರುವ ತನ್ನ ಬಾಲ್ಯದ ಮನೆಗೆ ತೆರಳಿದ ಭಾರತೀಯ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 75 ವರ್ಷಗಳ ಬಳಿಕ ಪಾಕ್ ​ನಲ್ಲಿರುವ ತನ್ನ ಬಾಲ್ಯದ ಮನೆಗೆ ತೆರಳಿದ ಭಾರತೀಯ ಮಹಿಳೆ

92 ವರ್ಷದ ಭಾರತೀಯ ಮಹಿಳೆ ರೀನಾ ಛಿಬರ್​ ಎಂಬವರು ಬರೋಬ್ಬರಿ 75 ವರ್ಷಗಳ ಬಳಿಕ ಪಾಕ್​ನಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ. ಪಾಕ್​ ಹೈ ಕಮಿಷನ್​ ರೀನಾರಿಗೆ ಮೂರು ತಿಂಗಳ ವೀಸಾವನ್ನು ನೀಡಿದೆ. ರೀನಾ ತಮ್ಮ ಬಾಲ್ಯವನ್ನು ಕಳೆದಿದ್ದ ಮನೆಯು ಪಾಕ್​ನ ರಾವಲ್ಪಿಂಡಿಯಲ್ಲಿದೆ. ಇಲ್ಲಿಗೆ ತೆರಳಲು ರೀನಾ ವಾಘಾ -ಅಟ್ಟಾರಿ ಗಡಿಯನ್ನು ದಾಟಿದ್ದಾರೆ.

ಭಾರತದಿಂದ ಪಾಕ್​ ವಿಭಜನೆಗೊಳ್ಳುವ ಕೆಲವೇ ತಿಂಗಳುಗಳ ಮೊದಲು ಅಂದರೆ 1946ರಲ್ಲಿ ರೀನಾ ಭಾರತಕ್ಕೆ ಬಂದಿದ್ದರು. ರೀನಾ ಹಾಗೂ ಆಕೆಯ ಸಹೋದರ ಸೋಲನ್​ ಮೊದಲು ಭಾರತಕ್ಕೆ ಬಂದಿದ್ದರು. ಇದಾದ ಬಳಿಕ ಅವರ ಪೋಷಕರು 1947ರಲ್ಲಿ ಭಾರತಕ್ಕೆ ಬಂದರು. ಪಾಕ್​ನಲ್ಲಿ ಅನೇಕ ಸ್ನೇಹಿತರನ್ನು ರೀನಾ ಹೊಂದಿದ್ದರು.

ರೀನಾ ಅನೇಕ ಸಮಯದಿಂದ ತನ್ನ ಪೂರ್ವಜರ ಮನೆಗೆ ಭೇಟಿ ನೀಡುವ ಆಶಯ ಹೊಂದಿದ್ದರು. ಭಾರತಕ್ಕೆ ಬಂದು 20 ವರ್ಷಗಳ ಬಳಿಕ ಅವರಿಗೆ ಭಾರತ – ಪಾಕ್​ ವಿಶೇಷ ಪಾಸ್​ಪೋಟ್​ ಸಿಕ್ಕಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಹೋಗಲು ಸಾಧ್ಯವಾಗಿರಲಿಲ್ಲ. ಇಂಡಿಯಾ-ಪಾಕಿಸ್ತಾನ್ ಹೆರಿಟೇಜ್ ಕ್ಲಬ್ ಎಂಬ ಫೇಸ್‌ಬುಕ್ ಗ್ರೂಪ್‌ಗೆ ಈ ವರ್ಷ ಸೇರಿಕೊಂಡಿದ್ದ ರೀನಾ ತನ್ನ ಬಾಲ್ಯದ ಮನೆಗೆ ಹೋಗಬೇಕೆಂಬ ಆಶಯವನ್ನು ಪೋಸ್ಟ್ ಮಾಡಿದ್ದಾರೆ.

ಈ ಗ್ರೂಪ್​ನಲ್ಲಿದ್ದ ಸಜಾದ್​ ಹುಸೇನ್​ರ ಸಹಾಯದಿಂದ ಅವರು ವೀಸಾವನ್ನು ಪಡೆದು ಇದೀಗ ಪಾಕ್​ ಹೈಕಮಿಷನ್​ನಿಂದ ವಿಶೇಷ ಪಾಸ್​ನ್ನು ಪಡೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...