alex Certify BIG NEWS: 2023 ರಲ್ಲೂ ಕಾಡಲಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ..! ದಿನಕ್ಕೆ 1,600 ಐಟಿ ಉದ್ಯೋಗಿಗಳು ಕೆಲಸದಿಂದ ವಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023 ರಲ್ಲೂ ಕಾಡಲಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ..! ದಿನಕ್ಕೆ 1,600 ಐಟಿ ಉದ್ಯೋಗಿಗಳು ಕೆಲಸದಿಂದ ವಜಾ

ಜಾಗತಿಕವಾಗಿ ಟೆಕ್ ಕೆಲಸಗಾರರಿಗೆ 2023 ವರ್ಷದ ಆರಂಭವೇ ಕೆಟ್ಟದಾಗಿ ಆಗುತ್ತಿದೆ. 91 ಕಂಪನಿಗಳು ಈ ತಿಂಗಳ ಮೊದಲ 15 ದಿನಗಳಲ್ಲಿ 24,000 ಟೆಕ್ ಕೆಲಸಗಾರರನ್ನು ವಜಾಗೊಳಿಸಿವೆ. ಇದು ಆರ್ಥಿಕ ಕುಸಿತ ಮತ್ತು ಆರ್ಥಿಕ ಹಿಂಜರಿತದ ಎಫೆಕ್ಟ್ ಆಗಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ 1,600 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಪ್ರತಿದಿನ ಕೆಲಸ ಕಳೆದುಕೊಳ್ಳುವ ಭಯದಲ್ಲೇ ದಿನ ದೂಡುವಂತಾಗಿದೆ.

2022 ರಲ್ಲಿ 1,000 ಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದವು. ಅದೇ ರೀತಿ 2023 ರ ಸಾಮೂಹಿಕ ಉದ್ಯೋಗ ಕಡಿತ ಹೊಸ ವರ್ಷದಲ್ಲಿಯೂ ಮುಂದುವರಿಯುತ್ತಿವೆ. ಭಾರತೀಯ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸಿಬ್ಬಂದಿಯನ್ನು ವಜಾಗೊಳಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿ ತಿಳಿಸಿದೆ.

ಹೋಮ್‌ಗೋನ್ ಸಾಮಾಜಿಕ ಮಾಧ್ಯಮ ಕಂಪನಿ ಶೇರ್‌ಚಾಟ್ (ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್) ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ತನ್ನ ಶೇ.20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದು 500 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಟ್ವಿಟರ್, ಗೂಗಲ್, ಸ್ಪ್ಯಾಪ್ ಮತ್ತು ಟೈಗರ್ ಗೋಬಲ್ ಬೆಂಬಲದೊಂದಿಗೆ, ಶೇರ್ ಚಾಟ್ ಸುಮಾರು 2,300 ಉದ್ಯೋಗಿಗಳನ್ನು ಹೊಂದಿದೆ.

ಒಲಾ ಮತ್ತು ಸ್ಕಿಟ್ ಡಾಟ್ ಎಐ ಕೂಡ ಈ ತಿಂಗಳು ಹೆಚ್ಚು ಜನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಡೋರ್ ಡೆಲವರಿ ಆ್ಯಪ್ ಡಂಜೆ ಕೂಡ ವೆಚ್ಚ ಕಡಿತದ ಕ್ರಮವಾಗಿ ಶೇ.3 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಭಾರತದಲ್ಲಿ ಈ ವರ್ಷದ ಪ್ರಾರಂಭವೇ ಟೆಕ್ ಉದ್ಯೋಗಿಗಳಿಗೆ ಕಹಿ ಅನುಭವ ನೀಡಿದೆ. 91 ಕಂಪನಿಗಳು ಈ ತಿಂಗಳ ಮೊದಲ 15 ದಿನಗಳಲ್ಲಿ 24,000 ಕ್ಯ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲಿ ಸುಮಾರು 1,000 ಮಂದಿ ಸೇರಿದಂತೆ ಜಾಗತಿಕವಾಗಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅಮೆಜಾನ್ ಘೋಷಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...