
ವರದಿಯ ಪ್ರಕಾರ, ಇಬ್ಬರು ಬಲಿಪಶುಗಳ ಗುರುತನ್ನು ಒಬ್ಬ ಪುರುಷ ಮತ್ತು ಮಹಿಳೆ ಎಂದು ಹೇಳಲಾಗಿದೆ. ಆದರೆ, ಅವರ ಕುಟುಂಬಗಳ ಕೋರಿಕೆಯ ಮೇರೆಗೆ ಹೆಸರನ್ನು ತಡೆಹಿಡಿಯಲಾಗಿದೆ. ಇದರೊಂದಿಗೆ, ಗುರುತಿಸಬೇಕಾದ 9/11 ಸಂತ್ರಸ್ತರ ಸಂಖ್ಯೆ 1,649 ಕ್ಕೆ ತಲುಪಿದೆ.
ಅಲ್-ಖೈದಾ ಭಯೋತ್ಪಾದಕರು ಹೈಜಾಕ್ ಮಾಡಿದ ಎರಡು ನಾಗರಿಕ ಪ್ರಯಾಣಿಕ ವಿಮಾನಗಳನ್ನು ನ್ಯೂಯಾರ್ಕ್‌ನ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದರು. ಈ ದುರಂತದಲ್ಲಿ ಒಟ್ಟು 2,977 ಮಂದಿ ಪ್ರಾಣ ಕಳೆದುಕೊಂಡ್ರು.
ದುರಂತದಲ್ಲಿ ಹಲವರ ಗುರುತು ಪತ್ತೆಯಾಗಿಲ್ಲ. 22 ವರ್ಷದ ಬಳಿಕ ಇದೀಗ ಇಬ್ಬರ ಗುರುತು ಪತ್ತೆಯಾಗಿದೆ. ಈ ಹೊಸ ಗುರುತಿಸುವಿಕೆ, ಈ ಸಂತ್ರಸ್ತರ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗೆ ಸೌಕರ್ಯವನ್ನು ತರಬಹುದು ಎಂದು ನಾವು ಭಾವಿಸುತ್ತೇವೆ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವಶೇಷಗಳನ್ನು ಹೇಗೆ ಗುರುತಿಸಲಾಯಿತು ?
ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ಸೀಕ್ವೆನ್ಸಿಂಗ್ ತಂತ್ರಜ್ಞಾನದ ಬಳಕೆಯ ಮೂಲಕ ಇಬ್ಬರು ಬಲಿಪಶುಗಳನ್ನು ಗುರುತಿಸಲಾಗಿದೆ. ಇದು ಸಾಂಪ್ರದಾಯಿಕ ಡಿಎನ್ಎ ತಂತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ತ್ವರಿತವಾಗಿರುವುದಾಗಿದೆ. ಅವರ ಅವಶೇಷಗಳನ್ನು ವರ್ಷಗಳ ಹಿಂದೆ ಸಂಗ್ರಹಿಸಲಾಗಿದೆ.
ಇದಕ್ಕೂ ಮೊದಲು, ಕಳೆದ ಎರಡು 9/11 ದಾಳಿಯ ಬಲಿಪಶುಗಳ ಗುರುತುಗಳನ್ನು ಸುಮಾರು ಎರಡು ವರ್ಷಗಳ ಹಿಂದೆ, 2021 ರಲ್ಲಿ ಮಾಡಲಾಯಿತು. ಇಲ್ಲಿಯವರೆಗೆ ದುರಂತದಲ್ಲಿ ಬಲಿಯಾದ ಸುಮಾರು 1,104 ಮಂದಿಯ ಗುರುತು ಇನ್ನೂ ಕೂಡ ಪತ್ತೆಯಾಗಿಲ್ಲ.
ಅವಶೇಷಗಳ ಗುರುತಿಸುವಿಕೆ ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ?
2001ರ ದುರಂತವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತು. ಕಿವುಡಗೊಳಿಸುವ ಘರ್ಜನೆಯೊಂದಿಗೆ ವರ್ಲ್ಡ್ ಟ್ರೇಡ್ ಸೆಂಟರ್ ನ ಎರಡು ಗೋಪುರಗಳು ಕುಸಿದು ಬಿದ್ದವು. ಕಟ್ಟಡದ ಒಳಗಿದ್ದವರು ಏನಾಯ್ತು ಎಂದು ಅಂದುಕೊಳ್ಳುವಷ್ಟರಲ್ಲಿ ದುರಂತವಾಗಿ ಬಲಿಯಾದ್ರು.
ಈ ಭೀಕರ ದುರಂತದ ಪ್ರಮಾಣವು ಎಷ್ಟು ತೀವ್ರವಾಗಿತ್ತು ಎಂದರೆ 22 ವರ್ಷಗಳ ನಂತರವೂ ನಾಪತ್ತೆಯಾದ ನೂರಾರು ಮಂದಿ ಇನ್ನೂ ಗುರುತಿಸಬಹುದಾದ ಕುರುಹುಗಳನ್ನು ಸಹ ಹೊಂದಿಲ್ಲ. ಪ್ರತಿ ವರ್ಷ, ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ನಲ್ಲಿ ಈ ಭೀಕರ ದುರಂತವನ್ನು ಸ್ಮರಿಸಲಾಗುತ್ತದೆ.