ಪಶ್ಚಿಮ ರೈಲ್ವೆ ಇಲಾಖೆಯು ಟಿಕೆಟ್ ರಹಿತ ಪ್ರಯಾಣ ಮಾಡಿದವರಿಂದ ಈವರೆಗೆ 80.07 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಜನವರಿವರೆಗೆ ಮಾಸ್ಕ್ ಇಲ್ಲದೇ ಪ್ರಯಾಣ ಬೆಳೆಸಿದವರ ವಿರುದ್ಧ ದಂಡದ ರೂಪದಲ್ಲಿ 26.92 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.
ಏಪ್ರಿಲ್ 2021ರಿಂದ ಜನವರಿ 2022ರವರೆಗೆ ನಡೆಸಲಾದ ತಪಾಸಣೆಗಳಲ್ಲಿ ಬುಕ್ ಮಾಡದ ಲಗೇಜ್ ಪ್ರಕರಣಗಳು ಸೇರಿದಂತೆ ಸುಮಾರು 13.67 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಒಟ್ಟು 80.07 ಕೋಟಿ ರೂಪಾಯಿಗಳನ್ನು ಪಶ್ಚಿಮ ರೈಲ್ವೆಯು ವಸೂಲಿ ಮಾಡಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮೀತ್ ಠಾಕೂರ್ ಹೇಳಿದ್ದಾರೆ.
ಈ ಅವಧಿಯಲ್ಲಿ ಕಾಯ್ದಿರಿಸಲಾದ ಟಿಕೆಟ್ಗಳ ವರ್ಗಾವಣೆಯ 9 ಪ್ರಕರಣಗಳು ವರದಿಯಾಗಿದೆ. ಇದು ಮಾತ್ರವಲ್ಲದೇ 540 ಭಿಕ್ಷುಕರು, 613 ಅನಧಿಕೃತ ಬೀದಿ ಬದಿ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 369 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯು ಹೇಳಿದೆ.